Advertisement
ಕಬ್ಬನ್‌ಪಾರ್ಕ್ ಸಂಚಾರ ಠಾಣೆಯಲ್ಲಿ ಪೇದೆ ಲೋಕೇಶಪ್ಪ ದಂಪತಿ ಪುತ್ರಿ ಹರ್ಷಾಲಿ ( 3) ಮೃತಬಾಲಕಿ. ಶಿವಾಜಿನಗರದ ಪೊಲೀಸ್ ವಸತಿ ಗೃಹ ಆವರಣದಲ್ಲಿ ಒಣಗಿದ ಮರದ ಕೊಂಬೆಗಳು ಮುರಿದ್ದು ಬಿದ್ದಿದ್ದರಿಂದ ಬೆಂಕಿ ಹಾಕಲಾಗಿತ್ತು.
Related Articles
Advertisement
ಶಿವಾಜಿನಗರ ಪೊಲೀಸರ ನಿರ್ಲಕ್ಷ್ಯ: ಮಾ. 5ರಂದು ಬೌರಿಂಗ್ ಆಸ್ಪತ್ರೆಯಲ್ಲಿ ಹರ್ಷಾಲಿಗೆ ಪ್ರಾಥಮಿಕ ಚಿಕಿತ್ಸೆ ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಒಂಬತ್ತು ದಿನಗಳ ಕಾಲ ಹರ್ಷಾಲಿ ಜೀವನ್ಮರಣ ಹೋರಾಟ ನಡೆಸಿ ಕೊನೆಯುಸಿರೆಳೆದರು. ಸುಟ್ಟಗಾಯಗಳಿಂದ ಹರ್ಷಾಲಿ ದಾಖಲಾದ ಬಗ್ಗೆ ಸ್ಥಳೀಯ ಠಾಣೆ ಶಿವಾಜಿನಗರಕ್ಕೆ ಮೆಮೊ ಕಳಿಸಲಾಗಿದೆ.
ಆದರೆ, ಪೊಲೀಸರು ಮೆಮೊ ದಾಖಲಿಸಿಕೊಂಡು ಸುಮ್ಮನಾದರು. ಕನಿಷ್ಠ ಆಸ್ಪತ್ರೆಗೆ ಬಂದು ಹರ್ಷಾಲಿ ಆರೋಗ್ಯ ವಿಚಾರಿಸಿಲ್ಲ. ಆಕೆಯ ಹೇಳಿಕೆ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಘಟನೆ ಬಗ್ಗೆ ಹಿರಿಯ ಅಧಿಕಾರಿಗಳು ನಮಗೆ ಮಾಹಿತಿ ಗೊತ್ತಿಲ್ಲ ಎನ್ನುತ್ತಾರೆ. ಹಾಗಾದರೆ ಈ ಕರ್ತವ್ಯ ಲೋಪಕ್ಕೆ ಹೊಣೆಯಾರು ಎಂದು ಹೆಸರು ಹೇಳಲು ಇಚ್ಛಿಸದ ಪೇದೆ ಅಳಲು ತೋಡಿಕೊಂಡರು.
ಘಟನೆ ನಡೆದದ್ದು ಹೇಗೆ?: ಮಾ. 5ರಂದು 4 ಗಂಟೆ ಸುಮಾರಿಗೆ ಹರ್ಷಾಲಿ ತನ್ನ ಸ್ನೇಹಿತರ ಜತೆ ಆಟವಾಡುತ್ತಿದ್ದಾಗ, ಹರ್ಷಾಲಿ ಕೈಯಲ್ಲಿದ್ದ ಬಾಲ್ ಪಡೆದುಕೊಳ್ಳಲು ಮತ್ತೂಂದು ಮಗು ಯತ್ನಿಸಿದೆ. ಈ ವೇಳೆ ಹರ್ಷಾಲಿ, ಒಣಗಿದ ಎಲೆಗಳು ಹಾಗೂ ಮರದ ಬುಡದಲ್ಲಿ ಬೂದಿಮುಚ್ಚಿದ ಬೆಂಕಿ ಕೆಂಡಗಳ ಮೇಲೆ ಬಿದ್ದುಬಿಟ್ಟಿದ್ದಾಳೆ.
ಈ ವೇಳೆ ಸ್ಥಳೀಯ ವ್ಯಕ್ತಿ ಮಗುವನ್ನು ಬೆಂಕಿಯಿಂದ ರಕ್ಷಿಸಿ, ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ವಿಕ್ಟೋರಿಯಾ ಮಹಾಬೋಧಿ ಸುಟ್ಟಗಾಯಗಳ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. 9 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಹರ್ಷಾಲಿ ಚಿಕಿತ್ಸೆ ಫಲಿಸದೆ ಮಾ. 13ರಂದು ಮೃತಪಟ್ಟಿದ್ದಾಳೆ.
ಸುಟ್ಟಗಾಯಗಳಿಂದ ನರಳುತ್ತಿದ್ದ ನನ್ನ ಮಗು ಹರ್ಷಾಲಿ ಆಸ್ಪತ್ರೆಯಲ್ಲಿ ನನ್ನನ್ನು ಕಂಡ ಕೂಡಲೇ ಅಪ್ಪಾ ಎಂದು ತಬ್ಬಿಕೊಂಡಿತು. ಆ ವೇಳೆ ಆಕೆ ಆಸ್ಪತ್ರೆಯಲ್ಲಿ ಮಾತನಾಡುತ್ತಿದ್ದಳು. ಘಟನೆಯ ಬಗ್ಗೆ ಆಕೆಯಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳಬಹುದಿತ್ತು. ಆದರೂ ಆ ಕೆಲಸ ಮಾಡಲಿಲ್ಲ. ನನ್ನ ಮಗುವಿಗೆ ಆದ ಘಟನೆ ಮತ್ಯಾವ ಮಕ್ಕಳಿಗೂ ಆಗಬಾರದು ಎಂಬುದಷ್ಟೇ ನನ್ನ ಮನವಿ.-ಲೋಕೇಶಪ್ಪ, ಹರ್ಷಾಲಿ ತಂದೆ ಶಿವಾಜಿನಗರ ಪೊಲೀಸ್ ವಸತಿ ಗೃಹದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಬಾಲಕಿ ಹರ್ಷಾಲಿ ಮೃತಪಟ್ಟಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ದುರ್ಘಟನೆಯಲ್ಲಿ ಕರ್ತ್ಯಲೋಪ ಎಸಗಿರುವುದು ಕಂಡು ಬಂದರೆ ಸಂಬಂಧಪಟ್ಟವರ ಬಗ್ಗೆ ಕ್ರಮ ಜರುಗಿಸಲಾಗುವುದು. ಈ ಬಗ್ಗೆ ವರದಿಯನ್ನು ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಲಾಗುವುದು.
-ರಾಹುಲ್‌ಕುಮಾರ್ ಶಹಾಪುರವಾಡ್, ಡಿಸಿಪಿ ಪೂರ್ವವಿಭಾಗ