ವಿಜಯಪುರ: ವಿದ್ಯುತ್ ಶಾಟ್ ಸರ್ಕ್ಯೂಟ್ ನಿಂದ ಕಬ್ಬಿನ ಗದ್ದೆಯೊಂದಕ್ಕೆ ಅಗ್ನಿ ಅನಾಹುತ ಸಂಭವಿಸಿದ್ದು, ಗದ್ದೆಯಲ್ಲಿ ಕಟಾವು ಮಾಡಿದ್ದ ಕಬ್ಬು ಹಾಗೂ ಕಬ್ಬು ಸಾಗಿಸಲು ಬಂದಿದ್ದ ಟ್ತ್ಯಾಕ್ಟರ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಮುದ್ದೇಬಿಹಾಳ ತಾಲೂಕಿನ ನಾಲತವಾಡ ಸಮೀಪದ ಬಾಚಿಹಾಳ ಗ್ರಾಮದ ರೈತ ಹನುಮಂತ ನಾಗಪ್ಪ ತೊಗರಿ ಇವರ ಕಬ್ಬಿನ ಗದ್ದೆಯಲ್ಲಿ ಘಟನೆ ನಡೆದಿದ್ದು, ಟ್ರ್ಯಾಕ್ಟರ್ ಭಸ್ಮಗೊಂಡಿದೆ.
ಕಬ್ಬು ಕಟಾವ ಮಾಡುವ ವೇಳೆ ಕಬ್ಬಿನ ಗದ್ದೆಯಲ್ಲಿ ಹಾಯ್ದಿರುವ ವಿದ್ಯುತ್ ತಂತಿಗಳ ಘರ್ಷಣೆಯಿಂದ ಬೆಂಕಿಕಿಡಿಗಳು ಹೊತ್ತುಕೊಂಡು ಈ ಅನಾಹುತಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಯತ್ನಾಳ ಬಿಜೆಪಿ ಸೇರ್ಪಡೆ ಬೇಡ ಎಂದರೂ ಯಡಿಯೂರಪ್ಪ ಕೇಳಲಿಲ್ಲ: ಜಿಗಜಿಣಗಿ
ಮುದ್ದೇಬಿಹಾಳ ಪಟ್ಟಣದಿಂದ 20-25 ಕಿ.ಮೀ ದೂರದಲ್ಲಿರುವ ದುರಂತ ಸ್ಥಳಕ್ಕೆ ಅಗ್ನಿಶಾಮಕ ವಾಹನ ಬರುವ ವೇಳೆಗೆ ಹಾನಿಯ ಪ್ರಮಾಣ ಹೆಚ್ಚಾಗಿತ್ತು. ತಡವಾಗಿ ಆಗಮಿಸಿದರೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಅಗ್ನಿ ಆಕಸ್ಮಿಕ ದುರಂತದಲ್ಲಿ ಸುಮಾರು 10 ಲಕ್ಷ ರೂ. ಮೌಲ್ಯದ ಕಬ್ಬು ಹಾನಿಯಾಗಿದೆ ಎಂದು ಪ್ರಾಥಮಿಕ ಅಂದಾಜಿಸಲಾಗಿದೆ.
ಕಬ್ಬು ಸಾಗಿಸಲು ಬಂದು ಬೆಂಕಿಗೆ ಆಹುತಿಯಾದ ಟ್ರ್ಯಾಕ್ಟರ್ ಸ್ಥಿತಿ ನೋಡಿ ಮಾಲೀಕ ಮಾನಪ್ಪ ಪತ್ತಾರ ಸ್ಥಳದಲ್ಲಿ ಗೋಳಿಡುತ್ತಿರುವುದು ನೆರೆದವರ ಮನಕರಗುವಂತೆ ಮಾಡಿತ್ತು.