Advertisement

Uppunda: ಗೂಡ್ಸ್ ರೈಲಿಗೆ ಆಕಸ್ಮಿಕ ಬೆಂಕಿ

10:58 AM Oct 10, 2023 | Team Udayavani |

ಉಪ್ಪುಂದ: ತಿಂಡಿ ತಿನಿಸುಗಳನ್ನು ಸಾಗಿಸುತ್ತಿದ್ದ ಗೂಡ್ಸ್ ರೈಲಿಗೆ ಬೆಂಕಿ ತಗುಲಿ ವಸ್ತುಗಳು ಸುಟ್ಟು ಹೋದ ಘಟನೆ ಬಿಜೂರು ರೈಲ್ವೆ ನಿಲ್ದಾಣದಲ್ಲಿ ಅ.10ರ ಮಂಗಳವಾರ ಮುಂಜಾನೆ ಸಂಭವಿಸಿದೆ.

Advertisement

ಅ.9 ರಂದು ಮುಂಬೈ ಕೋಲಾಡ್ ನಿಂದ  ಮಂಗಳೂರು ಸುರತ್ಕಲ್ ಕಡೆಗೆ ಲಾರಿಗಳನ್ನು ಹೊತ್ತ ಗೂಡ್ಸ್ ರೈಲು ಮಂಗಳವಾರ ಮುಂಜಾನೆ ಬೈಂದೂರು ತಾಲೂಕಿನ ಬಿಜೂರು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಬಿಜೂರು ರೈಲ್ವೆ ನಿಲ್ದಾಣದ ಸಮೀಪ ಬರುವಾಗ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.

ಲಾರಿಯೊಂದರಲ್ಲಿ ಬೆಂಕಿ ಹೊತ್ತಿಕೊಂಡು ಇರುವುದನ್ನು ನೋಡಿದ ಸಿಬಂದಿ ತಕ್ಷಣ ಗೂಡ್ಸ್ ರೈಲು ನಿಲ್ಲಿಸಿ ಬೆಂಕಿ ಆರಿಸಲು ಪ್ರಯತ್ನಿಸಿದರು.

ಬೈಂದೂರು ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸಿದರು. ಲಾರಿಯೊಳಗಿದ್ದ ತಿಂಡಿ ತಿನಿಸುಗಳು ಭಾಗಶಃ ಸುಟ್ಟು ಹೋಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next