ಹೊಸಕೋಟೆ : ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವ ಬಹುಕೋಟಿ ವೆಚ್ಚದ ಅದ್ದೂರಿ ಚಿತ್ರ ಬಾಹುಬಲಿ 2 ಚಿತ್ರ ಇನ್ನೇನು ದಾಖಲೆ ನಿರ್ಮಿಸುತ್ತೋ ಗೊತ್ತಿಲ್ಲ. ಚಿತ್ರದ ಪ್ರದರ್ಶನದ ವೇಳೆ ಚಿತ್ರಮಂದಿರದ ಹೊರಗಿದ್ದ ಬೈಕ್‌ಗಳಿಗೆ ಕಿಡಿಗೇಡಿಯೊಬ್ಬ ಬೆಂಕಿಯಿಟ್ಟ ಘಟನೆ ಶನಿವಾರ ಹೊಸಕೋಟೆಯಲ್ಲಿ ನಡೆದಿದೆ.
ವರದಿಯಾದ ಪ್ರಕಾರ ಕನ್ನಡಾಭಿಮಾನಿಯಾದ ಸಂತೋಷ್ ಎಂಬಾತ ಬಾಹುಬಲಿ ಚಿತ್ರಕ್ಕೆ ಅವಕಾಶ ನೀಡಿದ್ದಕ್ಕೆ ಅಲಂಕಾರ್ ಚಿತ್ರಮಂದಿರದ ಹೊರಗೆ ಪ್ರೇಕ್ಷಕರು ನಿಲ್ಲಿಸಿದ್ದ ಬೈಕ್‌ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಸ್ಥಳೀಯರ ಕೈಗೆ ಸಿಕಿ ಬಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಇನ್ನು ಕೆಲ ವರದಿಗಳ ಪ್ರಕಾರ ಮ್ಯಾಟನಿ ಶೋಗೆ ಟಿಕೆಟ್ ಸಿಗದೆ ಹತಾಶನಾಗಿ ಬೆಂಕಿ ಇಟ್ಟಿದ್ದಾನೆ ಎನ್ನಲಾಗಿದೆ.
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಚಿತ್ರಮಂದಿರದ ಸಿಬಂದಿಗಳು ನಂದಿಸಿದ್ದು, ಭಾರೀ ಹಾನಿಯನ್ನು ತಡೆದಿದ್ದಾರೆ. 10ಕ್ಕೂ ಹೆಚ್ಚು ಬೈಕ್‌ಗಳ ಸೀಟುಗಳು, ಪೆಟ್ರೋಲ್ ಟ್ಯಾಂಕ್ ಕವರ್‌ಗಳು ಸುಟ್ಟು ಭಸ್ಮವಾಗಿವೆ.
ಸಂತೋಷ್‌ನನ್ನು ವಶಕ್ಕೆ ಪಡೆದಿರುವ ಹೊಸಕೋಟೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.