Advertisement

ಸಮಾಜ ಕಲ್ಯಾಣ ಇಲಾಖೆಯ ದಾಖಲೆಗಳಿರುವ ಕೊಠಡಿಗೆ ಬೆಂಕಿ

10:02 AM Mar 11, 2022 | Team Udayavani |

ಹುಮನಾಬಾದ: ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ದಾಖಲೆಗಳಿರುವ ಕೊಠಡಿಗೆ ಗುರುವಾರ ಸಂಜೆ ಅನುಮಾನಸ್ಪದವಾಗಿ ಬೆಂಕಿ ಬಿದ್ದಿರುವ ಘಟನೆ ನಡೆದಿದೆ.

Advertisement

ಮುಖ್ಯ ಕಚೇರಿಯ ಪಕ್ಕದಲ್ಲಿಯೇ ದಾಖಲೆಗಳು ಸಂಗ್ರಹಿಸಿರುವ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಕೆಲ ದಾಖಲೆಗಳು ಬೆಂಕಿಗೆ ಆಹುತಿಯಾಗಿ ಇರುವುದು ಕಂಡುಬರುತ್ತಿದೆ. ಕೊಠಡಿಯ ಕಿಟಕಿಗಳು ತೆರೆದಿದ್ದು ದಾಖಲೆ ಪುಸ್ತಕಗಳು ಕಣ್ಣಿಗೆ ಕಾಣುವಂತಿವೆ. ಕಿಟಕಿ ಬಾಗಿಲುಗಳಿಗೆ ಯಾವುದೇ ಭದ್ರತೆ ಇಲ್ಲದ ಕಾರಣಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರಬೇಕೆಂದು ಹೇಳಲಾಗುತ್ತಿದೆ.

ಬೆಂಕಿ ಅವಘಡದ ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗಿರೀಶ್ ರಂಜೋಳಕರ್ ಮಾಹಿತಿ ನೀಡಿದ್ದಾರೆ.

ಕಳೆದ ಕೆಲ ವರ್ಷಗಳ ಹಿಂದೆ ಕೂಡ ಅದೇ ದಾಖಲೆಗಳಿರುವ ಕೋಣೆಗೆ ಬೆಂಕಿ ಬಿದ್ದಿತ್ತು. ಅನೇಕ ದಾಖಲೆಗಳು ಬೆಂಕಿಗೆ ಆಹುತಿಯಾಗಿದ್ದವು.  ಇದೀಗ ಮತ್ತೆ ಅದೇ ಕೋಣೆಗೆ ಬೆಂಕಿ ಕಾಣಿಸಿಕೊಂಡಿದ್ದು ಅನೇಕ ಅನುಮಾನಕ್ಕೆ ಎಡೆ ಮಾಡಿ ಕೊಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next