ಬೀಜಿಂಗ್: ಅರುಣಾಚಲ ಪ್ರದೇಶವನ್ನು ಭಾರತದ ಭೂಭಾಗ ಎಂದು ನಕಾಶೆಯೊಂದರಲ್ಲಿ ತೋರಿಸಿದ್ದಕ್ಕೆ ಕೆಂಡಾಮಂಡಲವಾಗಿರುವ ಚೀನ ಈ ಸಂಬಂಧ ಬರೋಬ್ಬರಿ 30 ಸಾವಿರದಷ್ಟು ಭೂಪಟಗಳನ್ನು ನಾಶ ಮಾಡಿದೆ. ಅರುಣಾಚಲ ಪ್ರದೇಶ ಹಾಗೂ ತೈವಾನ್ ಅನ್ನು ತನ್ನದೇ ಭೂಭಾಗ ಎಂದು ಚೀನ ಹಿಂದಿನಿಂದಲೂ ಪ್ರಬಲವಾದ ಮಂಡಿಸುತ್ತ ಬಂದಿದೆ. ಮುದ್ರಿತ ಭೂಪಟಗಳನ್ನು ವಿದೇಶಗಳಿಗೆ ರವಾನೆ ಮಾಡಲು ಉದ್ದೇಶಿಸಲಾಗಿತ್ತು ಎಂದು ಚೀನದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಚೀನದಲ್ಲಿ ಮುದ್ರಿತ ಭೂಪಟದಲ್ಲೇ ತಾನು ಹಕ್ಕು ಸಾಧಿಸುತ್ತಿರುವ ಭೂ ಪ್ರದೇಶಗಳು ಬೇರೊಂದು ರಾಷ್ಟ್ರಕ್ಕೆ ಸೇರಿದ್ದು ಮತ್ತು ತೈವಾನ್ ಸ್ವತಂತ್ರ ರಾಷ್ಟ್ರ ಎಂಬಂತೆ ತೋರಿಸಿದ್ದು ಚೀನಕ್ಕೆ ಚಡಪಡಿಸುವಂತೆ ಮಾಡಿದೆ. ಈ ಹಿನ್ನೆಲೆ ಯಲ್ಲಿ ಮುದ್ರಿತ ಸ್ಥಳದಲ್ಲೇ ಅದನ್ನು ನಾಶ ಪಡಿಸುವ ಕೆಲಸಕ್ಕೆ ಮುಂದಾಗಿದೆ.