Advertisement

ಆಮ್ಲಜನಕದ ಬದಲಿಗೆ ಅಗ್ನಿ ನಿರೋಧಕ ಸಿಲಿಂಡರ್ ಮಾರಿದ ಕಿರಾತಕರು

08:20 PM Apr 29, 2021 | Team Udayavani |

ನವದೆಹಲಿ : ಕೋವಿಡ್ ಎರಡನೇ ಅಲೆಯ ಪಿಡುಗಿನಲ್ಲಿ ಆಕ್ಸಿಜನ್‍ಗಾಗಿ ಜನರು ಪರದಾಡುತ್ತಿದ್ದರೆ, ಇದನ್ನೇ ಬಂಡವಾಳವನ್ನಾಗಿಸಿಕೊಂಡ ಕಿರಾತಕರಿಬ್ಬರು, ಆಕ್ಸಿಜನ್ ಸಿಲಿಂಡರ್ ಕೇಳಿದ್ದ ಮಹಿಳೆಗೆ ಅಗ್ನಿ ನಿರೋಧಕ ಸಿಲಿಂಡರ್ ಮಾರಾಟ ಮಾಡಿ ವಂಚಿಸಿದ್ದಾರೆ.

Advertisement

ಅಕ್ಸಿಜನ್ ಬದಲಿಗೆ ಅಗ್ನಿ ನಿರೋಧಕ ಸಿಲಿಂಡರ್ ಮಾರಾಟ ಮಾಡಿರುವ ಬಗ್ಗೆ ಬಿಂದಾಪುರದ ಶಿಶ್ರಾಮ್ ಪಾರ್ಕ್ ನಿವಾಸಿ ಗೀತಾ ಅರೋರಾ ಎಂಬವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ವಂಚಕರನ್ನು ಬಂಧಿಸಿದ್ದಾರೆ.

ವಿಕಾಸ್ ಪುರಿ ನಿವಾಸಿಗಳಾದ ಅಶುತೋಷ್ (19) ಮತ್ತು ಆಯುಷ್ ( 22) ಬಂಧಿತ ಆರೋಪಿಗಳು. ಅವರನ್ನು ಪಶ್ಚಿಮ ದೆಹಲಿಯ ಉತ್ತಮ್ ನಗರದಿಂದ ಬಂಧಿಸಲಾಗಿದೆ. ಅವರಿಂದ ಐದು ಅಗ್ನಿ ನಿರೋಧಕ ಸಿಲಿಂಡರ್ ವಶಕ್ಕೆ ಪಡೆಯಲಾಗಿದೆ. ಆಕ್ಸಿಜನ್ ಸಿಲಿಂಡರ್ ಎಂದು ನಂಬಿಸಿ 10 ಸಾವಿರ ರೂ. ಗೆ ಅಗ್ನಿ ನಿರೋಧಕ ಸಿಲಿಂಡರ್ ಮಾರಾಟ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆಯ ಸಂಬಂಧಿ ಕೋವಿಡ್-19 ನಿಂದ ಆಕ್ಸಿಜನ್ ಮಟ್ಟ ಕಡಿಮೆಯಾಗಿ ಉಸಿರಾಟ ಸಮಸ್ಯೆಯಿಂದ ನರಳುತ್ತಿದ್ದಾಗ ಆಕ್ಸಿಜನ್ ಸಿಲಿಂಡರ್ ಗಾಗಿ ವಂಚಕರ ಸಂಪರ್ಕಕ್ಕೆ ಬಂದಿದ್ದಾರೆ. ನಂತರ ಅವರನ್ನು ಸಂಪರ್ಕಿಸಿ ಮತ್ತೆ ತನ್ನ ಹಣವನ್ನು ಕೇಳಿದಾಗ ಆಕೆಯ ಫೋನ್ ಕರೆಯನ್ನು ಅವರು ಸ್ವೀಕರಿಸುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next