Advertisement

ಬೆಂಕಿ ಪೊಟ್ಟಣ’ಚಿತ್ರಕ್ಕೆ ಸಬ್ಸಿಡಿ: ಕೋರ್ಟ್‌ ತಿರಸ್ಕಾರ

06:20 AM Sep 16, 2017 | |

ಬೆಂಗಳೂರು: “ಬೆಂಕಿ ಪೊಟ್ಟಣ’ ಚಲನಚಿತ್ರಕ್ಕೆ 2014ನೇ ಸಾಲಿನ ಸಬ್ಸಿಡಿ ಹಣ ನೀಡಬೇಕೆಂಬ ಚಿತ್ರ ನಿರ್ಮಾಪಕರ ಮನವಿಯನ್ನು ಹೈಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ.

Advertisement

ತಮ್ಮ ಚಿತ್ರಕ್ಕೆ ಸಬ್ಸಿಡಿ ಹಣ ನೀಡಲು ವಾರ್ತಾ ಇಲಾಖೆಯ ನಿರ್ದೇಶಕರಿಗೆ ಸೂಚಿಸಬೇಕೆಂದು ಕೋರಿ ನಿರ್ಮಾಪಕ ಝಾಕೀರ್‌ ಅಲಿ ಖಾನ್‌ ರಿಟ್‌ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ಪೀಠ, ಆಯ್ಕೆ ಸಮಿತಿಯು ಈಗಾಗಲೇ ಎರಡು ಬಾರಿ ಸಿನಿಮಾ ವೀಕ್ಷಿಸಿ ಸಬ್ಸಿಡಿ ನೀಡುವ ಚಿತ್ರಗಳ ಪಟ್ಟಿಗೆ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಆದ್ದರಿಂದ ಮತ್ತೂಮ್ಮೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ಇತ್ಯರ್ಥಪಡಿಸಿತು. 2015ರ ಫೆಬ್ರವರಿಯಲ್ಲಿ ಬಿಡುಗಡೆಗೊಂಡಿದ್ದ ಬೆಂಕಿಪೊಟ್ಟಣ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. 2014ನೇ ಸಾಲಿನ ಸಬ್ಸಿಡಿ ನೀಡುವ
ಚಿತ್ರಗಳ ಪಟ್ಟಿಗೆ ತಮ್ಮ ಚಿತ್ರವನ್ನು ಪರಿಗಣಿಸುವಂತೆ ಚಿತ್ರ ನಿರ್ಮಾಪಕರು ಮನವಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next