Advertisement

Kottigehara: ವಿದ್ಯುತ್ ತಂತಿ ತಗುಲಿ ರಸ್ತೆ ಬದಿಯ ಮರಕ್ಕೆ ಬೆಂಕಿ

12:58 PM Jul 18, 2023 | Team Udayavani |

ಕೊಟ್ಟಿಗೆಹಾರ: ರಸ್ತೆ ಬದಿ ಒಣಗಿ ನಿಂತಿದ್ದ ಮರಕ್ಕೆ ವಿದ್ಯುತ್ ತಂತಿ ತಗುಲಿ ಬೆಂಕಿ ಹತ್ತಿ ಉರಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗಬ್ಗಲ್ ಸಮೀಪದ ಹಾದಿ ಓಣಿ ಗ್ರಾಮದಲ್ಲಿ ನಡೆದಿದೆ.

Advertisement

ಈ ಮಾರ್ಗ ರಾಜ್ಯ ಹೆದ್ದಾರಿಯಾಗಿದ್ದು, ಮೂಡಿಗೆರೆಯಿಂದ ಕೊಟ್ಟಿಗೆಹಾರ ಮುಖಾಂತರ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲ ಹಾಗೂ ಕಳಸಕ್ಕೆ ಹೋಗುವ ಸಾವಿರಾರು ವಾಹನಗಳು ನಿತ್ಯ ಓಡಾಡುತ್ತವೆ.

ಮರ ಹೊತ್ತಿ ಉರಿದ ಬಳಿಕ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದು, ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ತುಂಡಾದ ವಿದ್ಯುತ್ ತಂತಿ ರಸ್ತೆಯಲ್ಲಿ ಸಂಚರಿಸುವ ಯಾವುದಾದರೂ ವಾಹನದ ಮೇಲೆ ಬಿದ್ದಿದ್ದರೆ ವಾಹನ ಕೂಡ ವಿದ್ಯುತ್ ತಂತಿಯಿಂದ ಹೊತ್ತಿ ಉರಿಯುವ ಸಾಧ್ಯತೆ ಇತ್ತು.

ಆದರೆ, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ನವೀನ್ ಎಂಬವರು ಮರ ಹೊತ್ತಿ ಉರಿಯುವುದನ್ನು ಕಂಡು ಕೂಡಲೇ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.

ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿಗಳು ಭೇಟಿ ನೀಡಿ ವಿದ್ಯುತ್ ತಂತಿಗೆ ಅಡ್ಡ ಇರುವ ಮರಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ.

Advertisement

ಮಲೆನಾಡಲ್ಲಿ ಈ ರೀತಿ ವಿದ್ಯುತ್ ತಂತಿಗೆ ಅಂಟಿಕೊಂಡಂತಿರುವ ನೂರಾರು ಮರಗಳಿವೆ. ಯಾವುದಾದರೂ ಅನಾಹುತ ಸಂಭವಿಸುವ ಮೊದಲೇ ಮೆಸ್ಕಾಂ ಸಿಬ್ಬಂದಿಗಳು ಮರದ ಟೊಂಗೆಗಳನ್ನ ತೆರವುಗೊಳಿಸುವುದು ಒಳಿತು. ಇಲ್ಲವಾದರೆ ಅನಾಹುತ ಕಟ್ಟಿಟ್ಟ ಬುತ್ತಿ. ಮಳೆಗಾಲ ಆಗಿರುವುದರಿಂದ ಮಳೆ-ಗಾಳಿಗೆ ಕೂಡ ಮರಗಳು ಮುರಿದು ತಂತಿಯ ಮೇಲೆ ಬೀಳುತ್ತಿವೆ. ಹಾಗಾಗಿ, ಮೆಸ್ಕಾಂ ಸಿಬ್ಬಂದಿಗಳು ಕೂಡಲೇ ವಿದ್ಯುತ್ ತಂತಿಯ ಅಕ್ಕಪಕ್ಕದಲ್ಲಿರುವ ಮರದ ಟೊಂಗೆಗಳನ್ನು ತೆರವು ಮಾಡಬೇಕೆಂದು ಮಲೆನಾಡಿಗರು ಮನವಿ ಮಾಡಿದ್ದಾರೆ.‌

Advertisement

Udayavani is now on Telegram. Click here to join our channel and stay updated with the latest news.

Next