Advertisement

ಬಹುಮಹಡಿ ಕಟ್ಟಡಗಳಿಗೆ ಅಗ್ನಿಶಾಮಕ NOC ಕಡ್ಡಾಯ

11:17 PM Jul 19, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ 21 ಮೀಟರ್‌ ಎತ್ತರದ ಕಟ್ಟಡಗಳಿಗೆ ಅಗ್ನಿಶಾಮಕ ದಳದ ನಿರಾಕ್ಷೇಪಣ ಪತ್ರ ಕಡ್ಡಾಯಗೊಳಿಸುವ ಸಂಬಂಧ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ಮಸೂದೆ-2021 ಬುಧವಾರ ಮೇಲ್ಮನೆಯಲ್ಲಿ ಅಂಗೀಕಾರಗೊಂಡಿತು.

Advertisement

ಈ ಮೊದಲು ಬಹುಮಹಡಿ ಕಟ್ಟಡಗಳಿಗೆ ಅಗ್ನಿಶಾಮಕ ದಳದಿಂದ ನಿರಾಕ್ಷೇಪಣ ಪತ್ರ (ಎನ್‌ಒಸಿ) ಪಡೆಯುವುದು ಕಡ್ಡಾಯ ಇರಲಿಲ್ಲ. ಈಗ 21 ಮೀಟರ್‌ವರೆಗಿನ ಎತ್ತರದ ಕಟ್ಟಡಗಳನ್ನು ಬಹುಮಹಡಿ ಕಟ್ಟಡಗಳು ಎಂದು ಪರಿಗಣಿಸಿ, ಅಂತಹವುಗಳಿಗೆ ಸುರಕ್ಷತೆ ದೃಷ್ಟಿಯಿಂದ ಅಗ್ನಿಶಾಮಕದಳ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಎನ್‌ಒಸಿ ಪಡೆಯುವುದು ಕಡ್ಡಾಯಗೊಳಿಸಲಾಗಿದೆ.

ಸದನದಲ್ಲಿ ಮಸೂದೆ ಪ್ರಸ್ತಾವ ಮಂಡಿಸಿ ಮಾತನಾಡಿದ ಗೃಹ ಸಚಿವ ಡಾ| ಜಿ. ಪರಮೇಶ್ವರ್‌, ಬಹುಮಹಡಿ ಕಟ್ಟಡಗಳು ಅದರಲ್ಲೂ ವಿಶೇಷವಾಗಿ ಐಟಿ-ಬಿಟಿ ಕಂಪೆನಿಗಳು ಅತೀ ಹೆಚ್ಚು ಉದ್ಯೋಗ ಸೃಷ್ಟಿ ಜತೆಗೆ ಆದಾಯ ಕೂಡ ತಂದುಕೊಡುವುದರಿಂದ ಅವುಗಳಿಗೆ ಎನ್‌ಒಸಿ ಕಡ್ಡಾಯದಿಂದ ವಿನಾಯಿತಿ ನೀಡಲಾಗಿತ್ತು. ಈಗ ಸುರಕ್ಷತೆ ದೃಷ್ಟಿಯಿಂದ 21 ಮೀಟರ್‌ ಮತ್ತು ಅದಕ್ಕಿಂತ ಎತ್ತರದ ಎಲ್ಲ ಬಹುಮಹಡಿ ಕಟ್ಟಡಗಳಿಗೆ ಎನ್‌ಒಸಿ ಕಡ್ಡಾಯಗೊಳಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ನಿಯಮ ರೂಪಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ ಸಹ ಮೇಲ್ಮನೆಯಲ್ಲಿ ಅಂಗೀಕಾರಗೊಂಡಿತು. ಸಚಿವ ರಾಮಲಿಂಗಾರೆಡ್ಡಿ ಅವರು ಮಸೂದೆ ಮಂಡಿಸಿದರು.

ಬಹುಮಹಡಿ ಕಟ್ಟಡಗಳ ಪ್ರಮಾಣ ಹೆಚ್ಚು

ರಾಜ್ಯದಲ್ಲಿ ಅಗ್ನಿಶಾಮಕದಳ ಮತ್ತು ತುರ್ತು ಸೇವೆಗಳ ನಿಯಮಗಳನ್ನು ಉಲ್ಲಂ ಸಿದ ಪ್ರಕರಣಗಳ ಸಂಖ್ಯೆ 19,194 ಇದ್ದು, ಈ ಪೈಕಿ ಬೆಂಗಳೂರು ನಗರದಲ್ಲೇ 15,924 ದಾಖಲಾಗಿವೆ. ಈ ನಿಯಮ ಉಲ್ಲಂಘನೆಯಲ್ಲಿ ಬಹುಮಹಡಿ ಕಟ್ಟಡಗಳ ಪ್ರಮಾಣ ಹೆಚ್ಚಿದೆ ಎಂದು ಸಚಿವರು ಹೇಳಿದರು.

Advertisement

ನಿಲ್ಲದ ರಸ್ತೆ ಅಪಘಾತಗಳು; ಸಚಿವರ ಬೇಸರ

ಸಾಕಷ್ಟು ದಂಡ ಪ್ರಯೋಗ ಮತ್ತಿತರ ಕ್ರಮಗಳ ನಡುವೆಯೂ ರಾಜ್ಯದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, ಗಾಯಾಳುಗಳು ಮತ್ತು ಸಾವಿನ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. 2022ರಲ್ಲಿ ಹೆಚ್ಚು-ಕಡಿಮೆ ಅಪಘಾತಗಳ ಸಂಖ್ಯೆ 40 ಸಾವಿರದ ಆಸುಪಾಸು ಇದ್ದು, 48 ಸಾವಿರ ಜನ ಗಾಯಾಳುಗಳಾಗಿದ್ದಾರೆ. ಇದರಲ್ಲಿ ಸಾವಿನ ಸಂಖ್ಯೆ 11,700ಕ್ಕೆ ಏರಿಕೆಯಾಗಿದೆ. ಗಾಯಾಳು ಮತ್ತು ಮೃತಪಟ್ಟವರಲ್ಲಿ ಪುರುಷರೇ ಅಧಿಕ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next