Advertisement

ರಬಕವಿ-ಬನಹಟ್ಟಿ: ಹೊಸೂರನಲ್ಲಿ ಅಗ್ನಿ ಅವಘಡ ಲಕ್ಷಾಂತರೂ ಮೌಲ್ಯದ ಹಾನಿ

01:19 PM Apr 04, 2022 | Team Udayavani |

ರಬಕವಿ-ಬನಹಟ್ಟಿ : ರಬಕವಿ-ಬನಹಟ್ಟಿ ತಾಲೂಕಿನ ಹೊಸೂರ ಪಟ್ಟಣದಲ್ಲಿನ ಅರಿವೆ ಅಂಗಡಿಯೊಂದಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದಾಗಿ ಬೆಂಕಿ ತಗುಲಿ ಲಕ್ಷಾಂತರರೂ ಮೌಲ್ಯದ ಹಾನಿಯಾದ ಘಟನೆ ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಹೊಸೂರನ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರದ ಮಂಜುನಾಥ ಗಂಗಪ್ಪ ಚಿಪ್ಪಾಡಿ ಅವರಿಗೆ ಸೇರಿದ ಅರಿವೆ ಅಂಗಡಿಗೆ ಇಂದು ಮುಂಜಾನೆ ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದಾಗಿ ಬೆಂಕಿ ತಗುಲಿದ್ದು, ಬೆಂಕಿ ತಗುಲಿದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಕೂಡಲೇ ರಬಕವಿ-ಬನಹಟ್ಟಿ ಅಗ್ನಿ ಶಾಮಕದಳವು ಕೂಡಾ ಆಗಮಿಸಿ ಬೆಂಕಿಯನ್ನು ತಹಬದಿಗೆ ತರಲು ಯಶಸ್ವಿಯಾಯಿತು. ಇದರಿಂದ ಇನ್ನಷ್ಟ ಭಾರಿ ಪ್ರಮಾಣದ ಅವಗಡ ಸಂಭಿವಿಸುವುದನ್ನು ಸ್ಥಳಿಯರ ಸಮಯಪ್ರಜ್ಞೆ ಹಾಗೂ ಅಗ್ನಿ ಶಾಮಕದಳದವರ ಕಾರ್ಯದಿಂದ ಬೆಂಕಿ ನಂದಿಸಲು ಸಹಾಯವಾಯಿತು.

ಬೆಂಕಿ ಅವಗಡದಲ್ಲಿ ಸೀರೆ, ಡ್ರೆಸ್ ಮಟೀರಿಯಲ್ಸ್ ಸುಟ್ಟು ಕರಕಲಾಗಿದ್ದು, ಒಟ್ಟು ಅಂದಾಜು 15 ರಿಂದ 20 ಲಕ್ಷ ಮೊತ್ತದ ಹಾನಿ ಸಂಭವಿಸಿದೆ. ಅಲ್ಲದೇ ವ್ಯಾಪಾರ ಮಾಡಿದ ಸುಮಾರು 1.30 ಲಕ್ಷದಷ್ಟು ಅಧಿಕ ಮೊತ್ತದ ಹಣ ಕೂಡಾ ಸುಟ್ಟು ಕರಕಲಾಗಿವೆ ಎಂದು ಮಾಲೀಕರಾದ ಮಂಜುನಾಥ ಚಿಪ್ಪಾಡಿ ತಿಳಿಸಿದರು.

ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ಬನಹಟ್ಟಿ ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next