ಗಂಗಾವತಿ :ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ತಾಲ್ಲೂಕಿನ ಆನೆಗೊಂದಿ ಬಳಿ ಇರುವ ದುರ್ಗಾ ಪ್ಯಾರಡೈಸ್ ರೆಸಾರ್ಟ್ ಗೆ ಬೆಂಕಿ ಹೊತ್ತಿಕೊಂಡು 9 ಅತಿಥಿ ಗುಡಿಸಲುಗಳು ಬೆಂಕಿಗೆ ಭಸ್ಮವಾಗಿವೆ .
ವಿಧಾನ ಪರಿಷತ್ ಮಾಜಿ ಸದಸ್ಯ ಎಚ್ .ಆರ್. ಶ್ರೀನಾಥ್ ಒಡೆತನದ ದುರ್ಗಾ ಪ್ಯಾರಡೈಸ್ ರೆಸಾರ್ಟ್, ಆನೆಗೊಂದಿ ಹೊರವಲಯದಲ್ಲಿದ್ದು ಮಂಗಳವಾರ ರಾತ್ರಿ ರೆಸಾರ್ಟ್ ಬಂದ್ ಮಾಡಿದ ನಂತರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ .
ಇದರಿಂದ ರೆಸಾರ್ಟ್ ನ 9 ಗುಡಿಸಲುಗಳು ಸುಟ್ಟು ಹೋಗಿವೆ .ಕೂಡಲೇ ಅಗ್ನಿ ಶಾಮಕ ದಳಕ್ಕೆ ದೂರವಾಣಿ ಕರೆ ಮಾಡಿ ಮಾಹಿತಿ ರವಾನೆ ಮಾಡಿದ ತಕ್ಷಣ ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಅನಾಹುತವನ್ನು ಅಗ್ನಿ ಶಾಮಕ ದಳದ ಸಿಬ್ಬಂದಿಯವರು ತಪ್ಪಿಸಿದ್ದಾರೆ.
Related Articles
ಸ್ಥಳಕ್ಕೆ ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು . ದುರ್ಗಾ ಪ್ಯಾರಡೈಸ್ ರೆಸಾರ್ಟ್ ನ 9 ಅತಿಥಿ ಗುಡಿಸಲುಗಳಿದ್ದು ಉಳಿದಂತೆ ಆರ್ ಸಿಸಿ ಮತ್ತು ತಗಡಿನ ಕಟ್ಟಡಗಳಿವೆ .9 ಅತಿಥಿ ಗುಡಿಸಲುಗಳು ಸುಟ್ಟಿದ್ದು ಉಳಿದ ಕಟ್ಟಡಗಳಿಗೆ ಯಾವುದೇ ಹಾನಿಯಾಗಿಲ್ಲ .
ಭತ್ತದ ಹುಲ್ಲಿನ ಬಣವಿಗೆ ಬೆಂಕಿ : ತಾಲ್ಲೂಕಿನ ಬಸವನದುರ್ಗ ಗ್ರಾಮದ ಅಮರೇಶ ಲೈನ್ ದಾರ್ ಎಂಬ ರೈತನ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ .