Advertisement

ಉಜಿರೆಯ ಇಚ್ಚಿಲ ತ್ಯಾಜ್ಯ ಘಟಕಕ್ಕೆ ಬೆಂಕಿ

01:00 AM Mar 11, 2019 | Harsha Rao |

ಬೆಳ್ತಂಗಡಿ: ಉಜಿರೆ ಸಮೀಪದ ಇಚ್ಚಿಲದಲ್ಲಿ ಹಳೆ ತ್ಯಾಜ್ಯ ಘಟಕಕ್ಕೆ ರವಿವಾರ  ಬೆಂಕಿ ಸ್ಪರ್ಶವಾಗಿ ಆತಂಕ ಸೃಷ್ಟಿಯಾಗಿತ್ತು.

Advertisement

ಸಂಜೆ 6ರ ಸುಮಾರಿಗೆ ಬೆಂಕಿ ಬಿದ್ದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಳ್ತಂಗಡಿ ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡುವ ವೇಳೆಗೆ ಬೆಂಕಿ ಹೆಚ್ಚಿದ್ದರಿಂದ  ನಂದಿಸುವ ಕಾರ್ಯಕ್ಕೆ ಅಡ್ಡಿಯಾಗಿದೆ.

ಸುತ್ತಮುತ್ತ ಎರಡು ಎಕರೆ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿಕೊಂಡಿತ್ತು. ಅಗ್ನಿಶಾಮಕ ವಾಹನದಲ್ಲಿ ರಾತ್ರಿ 7.30ರ ಸುಮಾರಿಗೆ ನೀರು ಖಾಲಿಯಾದ ಪರಿಣಾಮ ಕಾರ್ಯಾಚರಣೆಗೆ ತೊಡಕಾಗಿತ್ತು. ಸ್ಥಳೀಯರ ಸಹಾಯದಿಂದ ನೀರಿನ ವ್ಯವಸ್ಥೆ ಮಾಡಿ ಬಳಿಕ ಕಾರ್ಯಾಚರಣೆ ಮುಂದುವರಿಸಲಾಯಿತು. 

ಪಂಚಾಯತ್‌ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು. 

ಕಿಡಿಗೇಡಿಗಳ ಕೃತ್ಯವೋ ?  ರಾಸಾಯನಿಕ ಕಾರಣವೋ? 
ತ್ಯಾಜ್ಯ ಹಳೆ ಘಟಕದ ಸಮೀಪ ಜನಸಂಖ್ಯೆ ವಿರಳವಾಗಿದ್ದು, ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಸಂಶಯ ವ್ಯಕ್ತವಾಗಿದೆ. ಮತ್ತೂಂದೆಡೆ ಬಿಸಿಲಿನ ತೀವ್ರತೆಗೆ ತ್ಯಾಜ್ಯದಲ್ಲಿ ರಾಸಾಯನಿಕ ಉತ್ಪತ್ತಿಯಾದ ಪರಿಣಾಮವೂ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿ¨ªಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next