Advertisement
ಉರಿ ಬಿಸಿಲಿನ ತಾಪಕ್ಕೆ ವಿದ್ಯುತ್ ಟ್ರಾನ್ಸ್‌ಫೋರ್ಮರ್‌ನಲ್ಲಿ ಶಾರ್ಟ್ ಸರ್ಕ್ನೂಟ್‌ನಿಂದ ಕಾಣಿಸಿಕೊಂಡ ಬೆಂಕಿಯಿಂದಾಗಿ ಹಲವು ಎಕರೆ ಪ್ರದೇಶಕ್ಕೆ ಬೆಂಕಿ ತಗಲಿತ್ತು. ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೇಮಾರು ಸಾಂದೀಪನೀ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಅಗ್ನಿಶಾಮಕದಳದವರಿಗೆ ಕರೆ ಮಾಡಿದ್ದು ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದರು. ಪರಿಸರದಲ್ಲಿಯೇ ಪೆಟ್ರೋಲ್ ಪಂಪ್ ಇದ್ದು ಸಕಾಲಿಕ ಕಾರ್ಯಾಚರಣೆಯಿಂದ ಸಂಭವಿಸಬಹುದಾದ ಭಾರೀ ಅನಾಹುತ ಸ್ವಲ್ಪದರಲ್ಲಿಯೇ ತಪ್ಪಿದೆ.
ಶಿರ್ವವನ್ನು ಕೇಂದ್ರೀಕರಿಸಿಕೊಂಡು ಸುತ್ತಮುತ್ತಲಿನ ಮಜೂರು, ಕುತ್ಯಾರು,ಕಳತ್ತೂರು, ಮುದರಂಗಡಿ, ಬೆಳ್ಮಣ್, ಸೂಡ,ಪಳ್ಳಿ, ಬೆಳ್ಳೆ ಪ್ರದೇಶಗಳಿಗೆ ಅನುಕೂಲವಾಗುವಂತೆ ಅಗ್ನಿಶಾಮಕ ದಳದ ಠಾಣೆಯ ಅಗತ್ಯವಿದೆ. ಶಿರ್ವ ಆಸುಪಾಸಿನ ಪ್ರದೇಶದಲ್ಲಿ ಬೆಂಕಿ ಅನಾಹುತ ಸಂಭವಿಸಿದರೆ 25 ಕಿ.ಮೀ. ದೂರದ ಉಡುಪಿಯಿಂದ ಅಗ್ನಿಶಾಮಕದಳ ದವರು ಬರುವಾಗ ಎಲ್ಲವೂ ಸುಟ್ಟು ಹೋಗಿರುತ್ತದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು,ಅಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿದ್ದು ತುರ್ತು ಅಗ್ನಿಶಾಮಕ ದಳದ ಅವಶ್ಯಕತೆಯಿದೆ ಎಂದು ಶಿರ್ವ ಗ್ರಾ.ಪಂ.ಸದಸ್ಯ ಕೆ.ಆರ್.ಪಾಟ್ಕರ್ ಒತ್ತಾಯಿಸಿದ್ದಾರೆ.