Advertisement

ಗುವಾಹಟಿ ಹೈಕೋರ್ಟ್‌ ಹಳೇ ಕಟ್ಟಡದಲ್ಲಿ ಬೆಂಕಿ; ಜೀವ ಹಾನಿ ಇಲ್ಲ

07:33 PM Jul 17, 2017 | udayavani editorial |

ಗುವಾಹಟಿ : ಗುವಾಹಟಿ ಹೈಕೋರ್ಟಿನ ಹಳೇ ಕಟ್ಟಡದಲ್ಲಿ ಸೋಮವಾರ ಸಂಜೆ ಬೆಂಕಿ ಆಕಸ್ಮಿಕ ಸಂಭವಿಸಿತು.  

Advertisement

ಹಳೇ ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟನೆಯ ಹೊಗೆ ಆವರಿಸಿಕೊಂಡಿತು. ಶಾರ್ಟ್‌ ಸರ್ಕ್ನೂಟ್‌ನಿಂದ ಬೆಂಕಿ ಉಂಟಾಗಿರಬಹುದೆಂದು ಶಂಕಿಸಲಾಗಿದೆ. 

ಅಗ್ನಿ ಶಾಮಕ ದಳದವರು ಕೂಡಲೇ ಸ್ಥಳಕ್ಕೆ ಧಾವಿಸಿ ಬಂದು ಬೆಂಕಿಯನ್ನು ನಂದಿಸಿದರು. ಯಾವುದೇ ಜೀವ ಹಾನಿ ಸಂಭವಿಸಿಲ್ಲ; ಆದರೆ ಸೊತ್ತು ನಷ್ಟದ ವಿವರಗಳನ್ನು ಇನ್ನಷ್ಟೇ ತಿಳಿಯಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next