Advertisement

ಚಾರಣಪ್ರಿಯರ ನೆಚ್ಚಿನ ತಾಣ ಗಡಾಯಿಕಲ್ಲು ಮೇಲ್ಭಾಗದಲ್ಲಿ ಬೆಂಕಿ ಅವಘಡ

10:03 AM Feb 25, 2020 | sudhir |

ಬೆಳ್ತಂಗಡಿ: ಚಾರಣ ಪ್ರಿಯರ ಸ್ವರ್ಗ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಗಡಾಯಿಕಲ್ಲಿನ ಮೇಲ್ಭಾಗ ಸಂಜೆ ಬೆಂಕಿ ಆವರಿಸಿದ ಘಟನೆ ನಡೆದಿದೆ.

Advertisement

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವುದರಿಂದ ಇಲ್ಲಿ ಅರಣ್ಯ ಇಲಾಖೆಯ ವ್ಯಾಪ್ತಿಗೊಳಪಡುವ ಗಡಾಯಿಕಲ್ಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಅನುಮತಿಯಿಲ್ಲದೆ ಇಲ್ಲಿ ಚಾರಣಕ್ಕೆ ತೆರಳುವಂತಿಲ್ಲ. ಬೆಂಕಿ ಅವಘಡಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

ನರಸಿಂಹ ಗಢ ಎಂದೇ ಪ್ರಸಿದ್ಧಿ ಪಡೆದ ಏಕ ಶೀಲಾ 1,700 ಅಡಿ ಎತ್ತರದ ಗಡಾಯಿಕಲ್ಲಿನಲ್ಲಿ ಬೆಂಕಿ ಆವರಿಸಿದ್ದರಿಂದ ರಾತ್ರಿ ಹೊತ್ತಲ್ಲಿ ಬೆಟ್ಡ ಹತ್ತಿ ಬೆಂಕಿ ನಂದಿಸಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ.

ಅರಣ್ಯ ಇಲಾಖೆ ಸಿಬಂದಿಗಳಿಂದ ಮುಂಜಾಗ್ರತಾ ಕ್ರಮವಾಗಿ ಚಾರಣಿಗರು ಸಾಗುವಲ್ಲಿ ಬೆಂಕಿ ಹಚ್ಚಿದ್ದೇವೆ ಎಂದು ತಿಳಿಸಿದ್ದಾರೆ.

Advertisement

ಆದರೆ ಏಕಾಏಕಿ ಸಂಜೆ ವೇಳೆ ಬೆಂಕಿ ಕಂಡಿದ್ದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದರು.

ಈ ಹಿಂದೆ ಜೂನ್ ತಿಂಗಳಲ್ಲಿ ಗಡಾಯಿಕಲ್ಲು ಪೂರ್ವಭಾಗ ಜರಿದಿತ್ತು. ಇದೀಗ ಈ ಕಲ್ಲಿನ ಬೆಟ್ಟದ ಮೇಲ್ಭಾಗದಲ್ಲಿರುವ ಗಿಡ ಮರಗಳ ಸಹಿತ ಕೆಲವೊಂದು ಪ್ರಾಣಿ ಸಂತತಿಗಳೂ ಸಹ ಬೆಂಕಿಗೆ ಆಹುತಿಯಾಗಿರುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next