Advertisement

ನಟಿ ದೀಪಿಕಾ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ, ಪದ್ಮಾವತ್‌ ನಟಿ ಸೇಫ್

03:28 PM Jun 13, 2018 | udayavani editorial |

ಮುಂಬಯಿ : ಖ್ಯಾತ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರ ಫ್ಲ್ಯಾಟ್‌ ಇರುವ ಬ್ಯೂಮಾಂಡ್‌ ಟವರ್ ಬಹು ಮಹಡಿ ಅಪಾರ್ಟ್‌ಮೆಂಟ್‌ ಕಟ್ಟಡದಲ್ಲಿ ಇಂದು ಬುಧವಾರ ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿದೆ. 

Advertisement

ಮುಂಬಯಿಯ ಪ್ರಭಾವತಿಯಲ್ಲಿರುವ ಈ ಅಪಾರ್ಟ್‌ಮೆಂಟ್‌ ಕಟ್ಟಡದ ಬಿ-ವಿಂಗ್‌ನಲ್ಲಿ  ಬೆಂಕಿ ಕಾಣಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ಬೆಂಕಿ ಅನಾಹುತ ಸಂಭವಿಸಿದಾಗ ದೀಪಿಕಾ ತನ್ನ ಫ್ಲ್ಯಾಟಿನಲ್ಲಿ ಇರಲಿಲ್ಲ ಎಂದು ಆಕೆಗೆ ನಿಕಟವಿರುವ ಮೂಲಗಳು ಹೇಳಿವೆ. ಆಕೆ ಬ್ರಾಂಡ್‌ ಒಂದರ ಶೂಟಿಂಗ್‌ಗಾಗಿ ಹೊರಗೆ ಹೋಗಿದ್ದರು. 

ದೀಪಿಕಾ ಅವರ ಮನೆಗಾಗಲೀ ಕಚೇರಿಗಾಗಿ ಬೆಂಕಿ ತಾಗಿಲ್ಲ; ಬೆಂಕಿ ಕಂಡುಬಂದಿರುವುದು 32ನೇ ಅಂತಸ್ತಿನಲ್ಲಿ. ಅಗ್ನಿ ಶಾಮಕ ದಳದವರು ಈಗಾಗಲೇಅಲ್ಲಿಗೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಆಕೆಯ ಸಿಬಂದಿಗಳು ಫ್ಲ್ಯಾಟಿನಿಂದ ಸುರಕ್ಷಿತವಾಗಿ ಹೊರಬಂದಿದ್ದಾರೆ ಎಂದು ದೀಪಿಕಾಗೆ ನಿಕಟವಿರುವ ಮೂಲಗಳು ತಿಳಿಸಿವೆ. 

ಬೆಂಕಿ ಅವಘಡದಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಅಗ್ನಿ ಶಾಮಕ ದಳದ ಮೂಲಗಳು ತಿಳಿಸಿವೆ. 
 

Advertisement

Udayavani is now on Telegram. Click here to join our channel and stay updated with the latest news.

Next