Advertisement

ಬೆಂಗಳೂರು ವಿವಿ ಆವರಣದಲ್ಲೂ ಬೆಂಕಿ

06:28 AM Feb 26, 2019 | Team Udayavani |

ಬೆಂಗಳೂರು: ಬಿಸಿಲ ತಾಪದಿಂದಾಗಿ ಬೆಂಗಳೂರು ವಿವಿ ಆವರಣ ಸೇರಿ ನಗರದ ಕೆಲವಡೆ ಸೋಮವಾರ ಬೆಂಕಿ ಅನಾಹುತ ಸಂಭವಿಸಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾ ಹಾನಿಯಾಗಿಲ್ಲ. ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಅರಣ್ಯ ಪ್ರದೇಶದಲ್ಲಿದ್ದ ಒಣ ಹುಲ್ಲಿಗೆ ಬೆಂಕಿ ಹೊತ್ತಿಕೊಂಡು ಕೆಲಕಾಲ ಆತಂಕದ ವಾತಾವಾರಣ ನಿರ್ಮಾಣವಾಗಿತ್ತು.

Advertisement

ಸೋಮವಾರ ಬೆಳಗ್ಗೆ 11.40ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಎರಡು ವಾಹನಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಾಗರಬಾವಿಯ ಬಿಡಿಎ ಕಾಂಪ್ಲೆಕ್ಸ್‌ ಸಮೀಪದ ಅನ್ನಪೂರ್ಣೇಶ್ವರಿ ದೇವಾಲಯದ ಸಮೀಪ ನಿಂತಿದ್ದ ಟಾಟಾಸೋಮೋ ಕಾರಿಗೆ ಇದಕ್ಕಿದ್ದಂತೆ ಬೆಂಕಿ ತಗುಲಿದ್ದು, ಕೂಡಲೇ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹಾಗೆಯೇ ಎಲೆಕ್ಟ್ರಾನಿಕ್‌ ಸಿಟಿ, ಹುಳಿಮಾವು, ವೈಟ್‌ಫೀಲ್ಡ್‌, ಸರ್ಜಾಪುರ ಸೇರೆ ಕೆಲವೆಡೆ ಕಸ ಹಾಗೂ ಖಾಲಿ ಜಾಗದಲ್ಲಿದ್ದ ಒಣ ಹುಲಿಗೆ ಬೆಂಕಿ ಹೊತ್ತಿಕೊಂಡಿತ್ತು.

ತಕ್ಷಣ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ. ಸೋಮವಾರ ಬೆಳಗ್ಗೆಯಿಂದ ಸುಮಾರು ಬೆಂಗಳೂರು ವಿವಿ ಆವರಣ, ನಾಗರಬಾವಿ ಸಮೀಪದ ಕಾರಿಗೆ ಬೆಂಕಿ ಅವಘಡ ಸೇರಿ ಸುಮಾರು 50ಕ್ಕೂ ಹೆಚ್ಚು  ಕರೆಗಳು ಸಹಾಯವಾಣಿ ಕೇಂದ್ರಕ್ಕೆ ಬಂದಿದೆ ಎಂದು ಅಗ್ನಿಶಾಮಕದಳದ ಅಧಿಕಾರಿಗಳು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next