Advertisement

ಚಲಿಸುತ್ತಿದ್ದ ರೈಲಿನ ಎಸಿ ಬೋಗಿಯಲ್ಲಿ ಬೆಂಕಿ

01:10 PM Apr 29, 2019 | Team Udayavani |

ಕುಂದಾಪುರ/ಉಪ್ಪುಂದ: ದಿಲ್ಲಿಯ ನಿಜಾಮುದ್ದೀನ್‌ನಿಂದ ಕೇರಳದತ್ತ ತೆರಳುತ್ತಿದ್ದ ಮಂಗಳ ಎಕ್ಸ್‌ಪ್ರೆಸ್‌ ರೈಲಿನ ಎಸಿ ಕೋಚ್‌ನಲ್ಲಿ ಶನಿವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡು ಭೀತಿ ಸೃಷ್ಟಿಯಾಯಿತು. ಆದರೆ ಅದೇ ಬೋಗಿಯಲ್ಲಿದ್ದ ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ಸಂಭಾವ್ಯ ಭಾರೀ ಅನಾಹುತ ತಪ್ಪಿತು.

Advertisement

ಮುಂಬಯಿಯಿಂದ ಎರ್ನಾಕುಲಂಗೆ ತೆರಳುತ್ತಿದ್ದ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ (12618) ರೈಲು ತಡರಾತ್ರಿ 1.20ರ ವೇಳೆಗೆ ಬೈಂದೂರು ದಾಟಿ ಖಂಬದಕೋಣೆ ಕಬ್ಬಿನಗದ್ದೆ ಬಳಿ ತಲುಪುವಾಗ ಎಸಿ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಎಲ್ಲ ಪ್ರಯಾಣಿಕರು ಗಾಢ ನಿದ್ದೆಯಲ್ಲಿದ್ದುದರಿಂದ ಆರಂಭದಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ. ಮಹಿಳೆಯೊಬ್ಬರು ಎಚ್ಚರವಾದಾಗ ಬೋಗಿಯಲ್ಲಿ ಬೆಂಕಿ ಕಂಡು ಗಾಬರಿಯಾದರು. ತತ್‌ಕ್ಷಣ ಜಾಗೃತರಾಗಿ ಎಲ್ಲರನ್ನೂ ಎಚ್ಚರಿಸಿದರು. ಅದರ ಪರಿಣಾಮ ರೈಲಿನ ಸಿಬಂದಿಯ ಗಮನಕ್ಕೆ ತರಲಾಯಿತು. ಕೂಡಲೇ ರೈಲನ್ನು ಬೈಂದೂರು ತಾಲೂಕಿನ ಸೇನಾಪುರ ಮತ್ತು ಬಿಜೂರು ಗ್ರಾಮದ ಮಧ್ಯೆ ನಿಲ್ಲಿಸಿ ಬೆಂಕಿ ನಂದಿಸಲಾಯಿತು.

ಎಸಿ ಕೋಚ್‌ನ ಅಗ್ನಿ ಶಮನಕ್ಕೆ ಸತತ ಮೂರು ತಾಸಿನ ಕಾರ್ಯಾಚರಣೆ ನಡೆಸಲಾಗಿದೆ. ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದರೂ ಅವರು ಬರುವುದರೊಳಗೆ ಸ್ಥಳೀಯರೇ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಎಸಿ
ಗ್ಲಾಸ್‌ ಒಡೆಯುವಾಗ ಸಂಭವಿಸಿದ ಸಣ್ಣಪುಟ್ಟ ಗಾಯ ಹೊರತುಪಡಿಸಿ ಎಲ್ಲ ಪ್ರಯಾಣಿಕರೂ ಕ್ಷೇಮವಾಗಿದ್ದಾರೆ. ಓರ್ವ ಮಹಿಳೆಗೆ ಸಣ್ಣಮಟ್ಟಿಗೆ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡಿತಾದರೂ ಕೂಡಲೇ ಚೇತರಿಸಿಕೊಂಡ ಕಾರಣ ಪ್ರಯಾಣ ಮುಂದುವರಿಸಿದರು. 23 ಬೋಗಿಗಳ ಈ ರೈಲಿನಲ್ಲಿ ನೂರಾರು ಪ್ರಯಾಣಿಕರಿದ್ದರು.


ಬೆಂಕಿ ಹತ್ತಿದ ಬಿ4 ಬೋಗಿ ಭಾಗಶಃ ಸುಟ್ಟು  ಹೋಗಿದೆ. ರೈಲನ್ನು ಮರಳಿ ಬಿಜೂರು ನಿಲ್ದಾಣಕ್ಕೆ ತಂದು ಪ್ರತ್ಯೇಕಿಸಿ, ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಿ ಬೆಳಗಿನ ಜಾವ 5ರ ವೇಳೆಗೆ ರೈಲನ್ನು ಮುಂದಕ್ಕೆ ಕಳುಹಿಸಲಾಯಿತು. ಪ್ರಯಾಣಿಕರು ಸುರಕ್ಷಿತವಾಗಿ ಎರ್ನಾಕುಲಂ ತಲುಪಿದ್ದಾರೆ. ಎಸಿ ಬೋಗಿಯಲ್ಲಿ ಶಾರ್ಟ್‌ ಸರ್ಕ್ನೂಟ್‌ ಈ ದುರ್ಘ‌ಟನೆಗೆ ಕಾರಣ ಎನ್ನಲಾಗಿದೆ.

ತನಿಖೆ
ಕೊಂಕಣ ರೈಲ್ವೇಯ ಇತಿಹಾಸದಲ್ಲಿ ಇಂತಹ ಬೆಂಕಿ ದುರ್ಘ‌ಟನೆ ಇದೇ ಪ್ರಥಮ ಎನ್ನಲಾಗಿದೆ. ಶಾರ್ಟ್‌ ಸರ್ಕ್ನೂಟ್‌ನಿಂದ ಅಗ್ನಿ ಆಕಸ್ಮಿಕ ಸಂಭವಿಸಿದೆ ಎಂದು ಮೆಲ್ನೋಟಕ್ಕೆ ಕಂಡು ಬಂದಿದೆಯಾದರೂ ಉನ್ನತ ತನಿಖೆ ನಡೆಸಲಾಗುವುದು. ಮಂಗಳೂರು, ಗೋವಾ, ಕಾರವಾರದಿಂದ ರೈಲ್ವೇ ತಂತ್ರಜ್ಞರು ಘಟನೆ ಕುರಿತು ತನಿಖೆಗೆ ಬಿಜೂರಿಗೆ ಆಗಮಿಸಿ¨ªಾರೆ ಎಂದು ಇಲಾಖಾ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next