Advertisement

ಅಗ್ನಿ ದೇವನೇ ನಮಃ ಜಲ ದೇವತೆಯೇ ನಮಃ

12:30 AM Feb 16, 2019 | |

ಅಗ್ನಿಯು ಯಾವಾಗಲೂ ಪ್ರಕಟವಾಗುವುದಿಲ್ಲ. ಅಪ್ರಕಟವಾಗಿರುವ ಬೆಂಕಿ ಬೇಕೆಂದಾಗ ಕಾಣಿಸಿಕೊಳ್ಳುತ್ತದೆ. ಅಂತೆಯೇ, ನಾವು ಕೂಡ ಎಲ್ಲಿ ನಮ್ಮ ಪ್ರಕಟ ಅಂದರೆ ನಮ್ಮ ಹಾಜರಾತಿ ಅನಗತ್ಯವೋ ಅಲ್ಲಿಗೆ ಹೋಗಬಾರದು. ಎಲ್ಲಿ ಅಗತ್ಯವು ಅಲ್ಲಿ ಅಗತ್ಯವಿರುವಷ್ಟು ಹೊತ್ತು ಮಾತ್ರ ಅಲ್ಲಿರಬೇಕು. 

Advertisement

ಭೂಮಿಯು ಮುಕ್ಕಾಲು ಭಾಗ ಜಲದಿಂದ ವೃತವಾಗಿದ್ದು ಕೇವಲ ಕಾಲು ಭಾಗ ಮಾತ್ರ ಭೂಪ್ರದೇಶದಿಂದ ಕೂಡಿದೆ. ಪಂಚಭೂತಗಳಲ್ಲಿ ಒಂದಾದ ಜಲದ ಸಾಮರ್ಥ್ಯ, ಅವಶ್ಯಕತೆಯನ್ನು ನಾವು ತಿಳಿದಿದ್ದೇವೆ. ಜೀವನಕ್ಕೆ ಅವಶ್ಯಕವಾದ ಅತ್ಯಮೂಲ್ಯ ವಸ್ತುಗಳÇÉೊಂದು ನೀರು. ಈ ನೀರೂ ಕೂಡ ಬದುಕಿನ ಪಾಠವನ್ನು ಹೇಳುತ್ತದೆ. ಅದನ್ನು ಸೂಕ್ಷ್ಮವಾಗಿ ಅರಿತುಕೊಂಡು ಅಳವಡಿಸಿಕೊಳ್ಳುವ ಮನಸ್ಸು ಬೇಕು. ಅರಿವೇ ದೇವರು ಎಂಬ ಮಾತಿದೆ. ಹಾಗಾಗಿ, ನಮ್ಮ ಸುತ್ತಲಿನ ವಸ್ತುಗಳಿಂದಲೂ ಬದುಕಿಗೆ ಬೇಕಾದ ಜ್ಞಾನ ದೊರೆಯುತ್ತದೆಂಬುದನ್ನು ಅರಿತುಕೊಳ್ಳಬೇಕು. ಅದನ್ನು ಗ್ರಹಿಸುವ ಗುಣವನ್ನು ಬೆಳಸಿಕೊಳ್ಳಬೇಕು. ಅಂಥ ಅರಿವಿನಿಂದ ನಮ್ಮ ಬದುಕು ಹಸನಾಗುವುದಂತೂ ಖಂಡಿತ.

ಒಂದು ಸರೋವರವನ್ನು ನೋಡಿ. ಬದುಕಿನ ಆನಂದವೇ ಅಲ್ಲಿದೆಯೆನೋ ಅನ್ನಿಸುತ್ತದೆ. ಒಂದು ಕÇÉೆಸೆಯಿರಿ. ಆ ಕಲ್ಲು ಬಿದ್ದ ಶಬ್ದದಿಂದ ಹಿಡಿದು ಅಲೆಗಳೂ ಕೂಡ ಆನಂದವನ್ನೇ ಉಂಟುಮಾಡುತ್ತವೆ. ಆ ಕಲ್ಲಿನಿಂದ ನೀರು ಕೆಸರಾದರೆ ನಿಧಾನವಾಗಿ ತಿಳಿಯಾಗುತ್ತ ಹೋಗಿ, ಮತ್ತೆ ಮೊದಲಿನ ರೂಪಕ್ಕೇ ಬಂದು ಬಿಡುತ್ತದೆ. ಅಂದರೆ,  ಜಲವು ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುತ್ತದೆ ಮತ್ತು ಅವುಗಳಿಂದ ವಿಚಲಿತವಾದರೂ ಮತ್ತೆ ಮೊದಲಿನಂತೆ ಏನೂ ಆಗಿಲ್ಲವೆಂಬಂತೆ ಇದ್ದು ಬಿಡುತ್ತದೆ. ಇಂತಹ ಮನಸ್ಸನ್ನು ನಾವು ಬೆಳೆಸಿಕೊಳ್ಳಬೇಕು.

ಸೋಲು-ದುಃಖಗಳು ಎಂದಿಗೂ ಬದುಕಿನ ಅಂತ್ಯವಲ್ಲ. ಬಿದ್ದ ಕಲ್ಲಿನಿಂದ ಒಂದು ತಲ್ಲಣವುಂಟಾಗಿದೆ ಅಷ್ಟೆ. ಆ ತಲ್ಲಣವನ್ನು ನಾವು ನೋವಿನ ರೂಪದಲ್ಲಿ ನೋಡುವುದಾಗ ಪ್ರತಿಕ್ರಿಯೆಯಾಗಿ ಸಿಟ್ಟಿನಿಂದ ನಿರ್ಣಯ ಕೈಗೊಳ್ಳುವುದಾಗಲಿ,  ಮಾಡದೆ ನೀರು ತಿಳಿಯಾಗುವಂತೆ ಮನಸ್ಸನ್ನು ತಿಳಿಗೊಳಿಸಿಕೊಳ್ಳಬೇಕು. ಅಂಥ ಅಚಲವಾದ ವ್ಯಕ್ತಿಣ್ತೀ ಇ¨ªಾಗ ಬದುಕು ಆತಂಕಗಳಿಗೆ ಹೆದರುವುದಿಲ್ಲ. ನಮ್ಮೊಳಗಿನ ಪರಿಶುದ್ಧತೆಯೂ ನೀರಿನಂತೆ ಇರಬೇಕು. ದೇವರ ಅಭಿಷೇಕದಿಂದ ಹಿಡಿದು, ನಮ್ಮ ಸ್ನಾನ, ಶುದ್ಧ, ಅಘÂì, ತೀರ್ಥ ಎಲ್ಲವದಕ್ಕೂ ನೀರು ಬೇಕು. ಅಂದರೆ ಯಾವ ವಸ್ತುವಿನ ಮೇಲೆ ನೀರು ಬೀಳುತ್ತದೆಯೋ ಅದು ಸ್ವತ್ಛವಾಗುತ್ತದೆ; ಶುದ್ಧವಾಗುತ್ತದೆ.

ನಾವೂ ಶುದ್ಧವಾದ ಮನಸ್ಸನ್ನು ಹೊಂದುತ್ತ ನಮ್ಮೊಡನೆ ಸೇರುವ ಎಲ್ಲರ ಮನಸ್ಸೂ ಶುದ್ಧಿಯಾಗುವ ರೀತಿಯಲ್ಲಿ ಬದುಕಬೇಕು. ಇನ್ನು, ಕಡಲು ಅಥವಾ ಸಮುದ್ರ. ಎಷ್ಟೇ ದೊಡ್ಡ ಒಡಲಿದ್ದರೂ ತುಂಡು ಕಸವನ್ನೂ ಇರಿಸಿಕೊಳ್ಳದು ಈ ಕಡಲು. ಕಸವನ್ನು ದಂಡೆಯತ್ತ ತಂದು ಬಿಸಾಡುತ್ತಲೇ ಇರುತ್ತದೆ. ನಾವೂ ಕೂಡ ಕೆಡುಕುಗಳನ್ನು ಮನದಿಂದ ಹೊರಗಿಡಬೇಕು. 

Advertisement

ಮದ್ಭಾಗವತದಲ್ಲಿ ಒಂದು ಶ್ಲೋಕವಿದೆ. ಅದರ ಪ್ರಕಾರ ನೀರು ಸ್ವಭಾವತಃ ಸ್ವತ್ಛವಾಗಿದೆ, ಪ್ರಿಯವಾಗಿದೆ. ತೀರ್ಥವಾಗುವ ಮೂಲಕ ಮನುಷ್ಯರನ್ನು ಪವಿತ್ರವಾಗಿಸುತ್ತದೆ. ಋಷಿಮುನಿಯ ಸ್ವಭಾವವೂ ಇದೇ ರೀತಿ ಇರುತ್ತದೆ. ಆತ ಸ್ವತ್ಛ ಸ್ವಭಾವದಿಂದ ಎಲ್ಲರಿಗೂ ಪ್ರಿಯನಾಗಿ ತನ್ನ ದೃಷ್ಟಿಯ ಮೂಲಕ ಜನರನ್ನು ಪವಿತ್ರವಾಗಿಸುತ್ತಾನೆ. ನಾವು ಕೂಡ ಈ ಜಲದಂತೆ ಶುದ್ಧ, ಸ್ನಿಗª ಮಧುರಸ್ವಭಾವವನ್ನು ಹೊಂದುವುದರಿಂದ ಬದುಕು ಸುಂದರವಾಗುತ್ತದೆ.

 ಐದನೆಯ ಗುರು ಅಗ್ನಿ
ಅಗ್ನಿ ಅಥವಾ ಬೆಂಕಿಯು ತೇಜಸ್ಸನ್ನು ಹೊಂದಿರುವಂತದ್ದೂ ಜ್ಯೋತಿಯೂ ಆಗಿರುತ್ತದೆ. ಅಗ್ನಿಗೆ ಇಂತಹುದೇ ಎಂಬ ರೂಪವಿಲ್ಲ. ಎಲ್ಲವನ್ನೂ ತನ್ನೊಡಲಿಗೆ ಹಾಕಿಕೊಂಡರೂ ಅದಕ್ಕೆ ಒಡಲಿಲ್ಲ. ಸರ್ವವನ್ನೂ ಭಕ್ಷ್ಯ ಮಾಡುತ್ತದಾದರೂ ಗುಣ ದೋಷಗಳಿಂದ ಲಿಪ್ತವಾಗುವುದಿಲ್ಲ. ಅಂದರೆ, ಅದಕ್ಕೆ ಇವು ಅಂಟಿಕೊಳ್ಳುವುದಿಲ್ಲ. ಮುನಿಯಾದವನೂ ಅಗ್ನಿಯಂತೆ ಸಂಗ್ರಹ ಪರಿಗ್ರಹಗಳಿಂದ ದೂರವಿದ್ದು, ತೇಜಸ್ವಿಯೂ ಗುಣದೋಷಗಳಿಂದ ದೂರವುಳಿದವನೂ ಆಗಿರುತ್ತಾನೆ ಎನ್ನುತ್ತದೆ ಮದ್ಭಾಗವತ. ಇದು ನಮ್ಮ ಜೀವನಕ್ಕೂ ಹೊಂದುವಂತಹ ನಿಯಮವನ್ನು ಹೇಳುತ್ತದೆ. ಅಗ್ನಿ ಅಥವಾ ಬೆಂಕಿಯಿಂದಲೂ ನಾವು ಜ್ಞಾನವನ್ನು ಪಡೆಯಬಹು¨ªಾದರಿಂದ ಅಗ್ನಿಯೂ ಗುರುವೇ.

ಅಗ್ನಿ ಎಂದರೆ ಬೆಳಕು, ದೀಪ. ಉರಿಯನ್ನು ಹೊಂದಿರುವ ಜ್ವಾಲೆ. ಇದರ ಅಸ್ಥಿತ್ವವೇ ವಿಶೇಷವಾಗಿದೆ. ಕಡ್ಡಿ ಗೀರಿದಾಗ ಕಾಣಿಸುತ್ತದೆ. ಆರಿಸಿದಾಗ ಮಾಯವಾಗುತ್ತದೆ. ಎಷ್ಟು ಅಗತ್ಯವಿದೆಯೋ ಅಷ್ಟು ಹೊತ್ತು ಅದರ ಕೆಲಸ ಮಾಡುತ್ತಲೇ ಇರುತ್ತದೆ. ಅದು ವಸ್ತುವನ್ನು ಸುಡುತ್ತದೆ ಎಂಬುದು ಕಣ್ಣಿಗೆ ಕಾಣುವ ಸಂಗತಿ. ಅದು ಆ ವಸ್ತುವನ್ನು ಸೇವಿಸಿಯೂ ಇರಬಹುದು. ಅಗ್ನಿಯನ್ನು ಅಗ್ನಿದೇವ ಎಂದು ಪೂಜಿಸುತ್ತೇವೆ. ಹೋಮ ಹವನಗಳಲ್ಲಿ ದೇವರಿಗೆ ಅರ್ಪಿಸುವ ಹವಿಸ್ಸನ್ನು ನಮ್ಮಿಂದ ದೇವರಿಗೆ ಮುಟ್ಟಿಸುವ ಕಾರ್ಯವನ್ನು ಮಾಡುವವನೇ ಈ ಅಗ್ನಿದೇವ.

ಹಾಗಾಗಿ, ಅಗ್ನಿಯ ಮೂಲಕ,  ಅಂದರೆ ಬೆಂಕಿಯ ಮೂಲಕವೇ ಯಜ್ಞಕುಂಡದಲ್ಲಿ ಹವಿಸ್ಸನ್ನು ಸಮರ್ಪಿಸಲಾಗುತ್ತದೆ. ಅಗ್ನಿಯು ಜನರ ಮತ್ತು ದೇವರ ನಡುವಿನ ಮಾಧ್ಯಮ. ಕತ್ತಲಿಗೆ ಬೆಳಕಾಗಿಯೂ ಕಾರ್ಯನಿರ್ವಹಿಸುವ ಅಗ್ನಿ ನಮ್ಮ ಜೀವನಕ್ಕೆ ಅಗತ್ಯವಾದುದು. ಇಂತಹ ಅಗ್ನಿಯು ಕಲಿಸುವ ಪಾಠವಾದರೂ ಯಾವುದು?

ಅಗ್ನಿಯು ತೇಜಸ್ಸಿನ ಪ್ರತಿರೂಪ. ಅಂತಹ ತೇಜಸ್ಸನ್ನು ನಾವು ಕೂಡ ಹೊಂದಬಹುದು. ಆದರೆ ಅಗ್ನಿಯಂತೆಯೇ ಎಲ್ಲವನ್ನೂ ನುಂಗಿಬಿಡುವ ಅದರ ಗುಣಕ್ಕೆ ವಶವಾಗದೇ ಹಾಗೆಯೇ ಇರಬೇಕು. ದುರ್ಗುಣಗಳು ಧಾರಾಳವಾಗಿರುವ ಭೂಮಿಯಲ್ಲಿ ಅದನ್ನು ಸುಡಬೇಕು. ನಾವು ಅಂತಹ ದುರ್ಗುಣಗಳಿಂದ ದೋಷಿಯಾಗಿದ್ದರೆ ಮೊದಲು ಆ ದುರ್ಗುಣಗಳನ್ನು ಸುಡಬೇಕು. ಇಲ್ಲಿ ಸುಡುವುದು ಎಂದರೆ ಅದರ ಅಸ್ತಿತ್ವವನ್ನೇ ಇಲ್ಲವಾಗಿಸುವುದು. ಇದರಿಂದ ನಾವು ಅಂತಹ ದೋಷಗಳಿಂದ ಪಾರಾಗಬಹುದು. ಅಗ್ನಿಯು ಯಾವಾಗಲೂ ಪ್ರಕಟವಾಗುವುದಿಲ್ಲ. ಅಪ್ರಕಟವಾಗಿರುವ ಬೆಂಕಿ ಬೇಕೆಂದಾಗ ಕಾಣಿಸಿಕೊಳ್ಳುತ್ತದೆ. ಅಂತೆಯೇ, ನಾವು ಕೂಡ ಎಲ್ಲಿ ನಮ್ಮ ಪ್ರಕಟ ಅಂದರೆ ನಮ್ಮ ಹಾಜರಾತಿ ಅನಗತ್ಯವೋ ಅಲ್ಲಿಗೆ ಹೋಗಬಾರದು. ಎಲ್ಲಿ ಅಗತ್ಯವು ಅಲ್ಲಿ ಅಗತ್ಯವಿರುವಷ್ಟು ಹೊತ್ತು ಮಾತ್ರ ಅಲ್ಲಿರಬೇಕು. ಇದು ಅಗ್ನಿಯಿಂದ ಅರಿಯಬೇಕಾದ ಜ್ಞಾನ.

ದೀಪಕ್ಕೆ ವಿಶೇಷ ಸ್ಥಾನವಿರುವುದು ನಮಗೆಲ್ಲರಿಗೂ ಗೊತ್ತು. ದೀಪ ಬೆಳಗುವುದೆಂದರೆ ಅದು ಬೆಳವಣಿಗೆಯ ಸಂಕೇತ. ಶಾಂತಿಯ ಸಂಕೇತ. ಅಜ್ಞಾನದ ನಾಶದ ಸಂಕೇತ.  ಹಾಗಾಗಿ, ದೀಪದಂತಹ ಮನಸ್ಸು ನಮ್ಮದಾಗಬೇಕು. ಅಗ್ನಿ ಒಂದು ವಸ್ತುವನ್ನು ಸುಟ್ಟರೂ ಆ ವಸ್ತುವಿನ ಗುಣಗಳನ್ನು ತಾನು ಹೊಂದದೆ ಅಗ್ನಿಯಾಗಿಯೇ ಉಳಿದುಕೊಳ್ಳುವುದೆಯಲ್ಲ; ಹಾಗೇ ಈ ಪ್ರಪಂಚದಲ್ಲಿ ಕೆಡುಕೆಂಬುದು ನಮ್ಮಿಂದ ಸುಡಲ್ಪಡಬೇಕೇ ಹೊರತು ನಾವೇ ಅದರೊಳಗೆ ಸಿಲುಕಿಕೊಳ್ಳಬಾರದು; ಅದರ ಗುಣ ನಮಗಂಟಬಾರದು. ಇದು ಅಗ್ನಿಯಿಂದ ಸೂಚಿತ‌ವಾಗುವ ಸಂದೇಶ.

ಆತ್ಮವನ್ನು ಅಗ್ನಿಯ ರೂಪದಂತೆಯೇ ಇದೆ ಎಂಬುದನ್ನೂ ಅರಿತುಕೊಳ್ಳಬೇಕು. ಎಲ್ಲವನ್ನೂ ಸುಡುವ ಅಗ್ನಿಯು ಆ ಸುಡಲ್ಪಪಡುತ್ತಿರುವ ವಸ್ತುವಿನ ರೂಪದಂತೆ ಕಂಡು ಬರುತ್ತದೆ. ಅಂತೆಯೇ ಎÇÉಾ ಚರಾಚರ ಪ್ರಾಣಿಗಳಲ್ಲಿ ಒಂದೇ ಆತ್ಮವು ಆಯಾಯ ಪ್ರಾಣಿಗಳ ರೂಪದಲ್ಲಿ ಕಂಡುಬರುತ್ತದೆ. ಹಾಗಾಗಿ, ನಮ್ಮ ಆತ್ಮದಂತೆ ಎಲ್ಲ ಜೀವಿಗಳಲ್ಲಿನ ಆತ್ಮವನ್ನು ಗೌರವಿಸಬೇಕು ಮತ್ತು ನಮ್ಮ ಆತ್ಮವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಇದು ಅಗ್ನಿಯ ಬೆಳಕಿನ ಸತ್ಯ.

..ಮುಂದುವರಿಯುವುದು.

ವಿಷ್ಣುಭಟ್‌ ಹೊಸ್ಮನೆ 

Advertisement

Udayavani is now on Telegram. Click here to join our channel and stay updated with the latest news.

Next