ಮೈಸೂರು: ವಿದ್ಯುತ್ ಶಾರ್ಟ್‌ಸರ್ಕ್ನೂಟ್‌ನಿಂದ ಸಂಭವಿಸಿದ ಬೆಂಕಿ ಅನಾಹುತದಿಂದ ಅಂಗಡಿಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಹಣ್ಣು ಹಾಗೂ ನಗದು ಸುಟ್ಟುಭಸ್ಮವಾಗಿರುವ ಘಟನೆ ನಗರದ ಆರ್‌ಎಂಸಿ ಮಾರುಕಟ್ಟೆಯಲ್ಲಿ ನಡೆದಿದೆ.
ನಗರದ ನ್ಯೂ ಸಯ್ನಾಜಿರಾವ್ ರಸ್ತೆಯಲ್ಲಿರುವ ಹಳೆ ಆರ್‌ಎಂಸಿ ಮಾರುಕಟ್ಟೆಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಹಣ್ಣಿನ ಅಂಗಡಿಯಲ್ಲಿ ಇಡಲಾಗಿದ್ದ ಅಂದಾಜು 7 ಲಕ್ಷ ರೂ. ನಗದು ಹಾಗೂ 40 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಬಗೆಯ ಹಣ್ಣುಗಳು ಸುಟ್ಟು ಹೋಗಿದೆ.
ಆರ್‌ಎಂಸಿ ಮಾರುಕಟ್ಟೆಯ ಅಂಗಡಿ ಸಂಖ್ಯೆ 44ರಲ್ಲಿ ಕಳೆದ ರಾತ್ರಿ 10.30ರ ಸಮಯದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸಕೂಟ್ ಉಂಟಾಗಿ, ಹಣ್ಣುಗಳನ್ನು ಇರಿಸಿದ್ದ ಮರದ ಪೆಟ್ಟಿಗೆಗಳಿಗೆ ಬೆಂಕಿ ತಗುಲಿದೆ. ಇದರಿಂದ ಸಂಭವಿಸಿದ ಬೆಂಕಿಯ ಜಾÌಲೆ ಕೂಡಲೇ ಅಕ್ಕಪಕ್ಕದ ಅಂಗಡಿಗಳಿಗೂ ವ್ಯಾಪಿಸಿದೆ.
ಇದರ ಪರಿಣಾಮ ಅಂಗಡಿ ಮಳಿಗೆಗಳಲ್ಲಿ ಇರಿಸಲಾಗಿದ್ದ ಮಾವಿನ ಹಣ್ಣು, ಪೈನಾಪಲ್, ಕಲ್ಲಂಗಡಿ, ಸಪೋಟಾ, ಸೇಬು, ದ್ರಾಕ್ಷಿ ಸೇರಿದಂತೆ ಇನ್ನಿತರ ಬಗೆಯ ಹಣ್ಣುಗಳು ಬೆಂಕಿಯಲ್ಲಿ ಭಸ್ಮವಾಗಿದೆ.
ಬಳಿಕ ವಿಷಯ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಮೂರು ಗಂಟೆಗಳ ಕಾಲ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಕಾರ್ಯಾಚರಣೆಯಲ್ಲಿ ಪ್ರಾದೇಶಿಕ ಅಗ್ನಿಶಾಮಕಾಧಿಕಾರಿ ಈಶ್ವರ್ ನಾಯಕ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಭರತ್ ಕುಮಾರ್, ಅಗ್ನಿಶಾಮಕ ಪುರುಷೋತ್ತಮ್, ಮಹೇಶ್, ಪೃಥ್ವಿ, ಮಹದೇವ್, ವೆಂಕಟೇಶ್, ರಾಮೇಗೌಡ, ಮಹದೇವ ಸ್ವಾಮಿ, ಎಸ್. ಮಹಾದೇವು, ಕೃಷ್ಣ, ಶಿವಲಿಂಗಯ್ಯ ಪಾಲ್ಗೊಂಡಿದ್ದರು.