Advertisement

ಮಂಗಳೂರು : ಮೂರು ಮೀನುಗಾರಿಕಾ ದೋಣಿಗಳಿಗೆ ಬೆಂಕಿ

09:17 AM Aug 02, 2019 | Hari Prasad |

ಮಂಗಳೂರು: ಇಲ್ಲಿನ ಧಕ್ಕೆಯಲ್ಲಿ ಲಂಗರು ಹಾಕಲಾಗಿದ್ದ ಮೂರು ಮೀನುಗಾರಿಕಾ ದೋಣಿಗಳಿಗೆ ಬೆಂಕಿ ತಗುಲಿರುವ ಘಟನೆ ಗುರುವಾರದಂದು ವರದಿಯಾಗಿದೆ.

Advertisement

ಧಕ್ಕೆಯ ಒಳಭಾಗದಲ್ಲಿರುವ ಇಂಜಿನಿಯರಿಂಗ್ ಯಾರ್ಡ್ ನಲ್ಲಿ ಈ ಬೆಂಕಿ ಆಕಸ್ಮಿಕ ನಡೆದಿದ್ದು ಬೆಂಕಿ ತಗುಲಿರುವ ಮೂರೂ ದೋಣಿಗಳೂ ಹೊಸತು ಎಂದು ತಿಳಿದುಬಂದಿದೆ.

ಘಟನೆ ನಡೆದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಎರಡು ವಾಹನಗಳು ಮತ್ತು ಸಿಬ್ಬಂದಿಗಳು ಬೆಂಕಿಯನ್ನು ನಿಯಂತ್ರಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸದ್ಯಕ್ಕೆ ಬೆಂಕಿಯನ್ನು ನಿಯಂತ್ರಿಸುವಲ್ಲಿ ಅಗ್ನಿಶಾಮಕ ದಳದವರು ಯಶಸ್ವಿಯಾಗಿದ್ದಾರೆ.

ಮತ್ತು ಈ ದುರ್ಘಟನೆಯಿಂದ ಅಂದಾಜು ಒಂದು ಕೋಟಿ ರೂಪಾಯಿಗಳಷ್ಟು ನಷ್ಟ ಸಂಭವಿಸರಬಹುದೆಂದು ಹೆಳಲಾಗುತ್ತಿದೆ.

ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.



Advertisement
Advertisement

Udayavani is now on Telegram. Click here to join our channel and stay updated with the latest news.

Next