Advertisement

ಶ್ರೀಶೈಲಂ ಜಲವಿದ್ಯುತ್ ಘಟಕದಲ್ಲಿ ಬೆಂಕಿ ಅವಗಢ: 10 ಜನರ ರಕ್ಷಣೆ, 8 ಮಂದಿ ಸಿಲುಕಿರುವ ಶಂಕೆ

01:10 PM Aug 21, 2020 | keerthan |

ಶ್ರೀಶೈಲಂ ( ತೆಲಂಗಾಣ): ಇಲ್ಲಿನ ಜಲವಿದ್ಯುತ್ ಘಟಕದಲ್ಲಿ ಅಗ್ನಿ ಅವಗಢ ಸಂಭವಿಸಿದ್ದು, ಘಟಕದಲ್ಲಿ ಇನ್ನೂ ಎಂಟು ಮಂದಿ ಸಿಲುಕಿದ್ದಾರೆ ಎಂದು ವರದಿಯಾಗಿದೆ.

Advertisement

ಗುರುವಾರ ರಾತ್ರಿ 10.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಜಲ ವಿದ್ಯುತ್ ಘಟಕದ ನೆಲಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ನಿಂದ ದುರಂತ ನಡೆದಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.

ಘಟನೆ ನಡೆದಾಗ ಕನಿಷ್ಠ 25 ಮಂದಿ ಕೆಲಸ ಮಾಡುತ್ತಿದ್ದರು. ಹತ್ತು ಜನರನ್ನು ಈಗಾಗಲೇ ರಕ್ಷಣೆ ಮಾಡಿದ್ದು, ಇನ್ನೂ ಎಂಟು ಮಂದಿಯ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.

ನೆಲಮಹಡಿಯ ಹೈಡಲ್ ವಿದ್ಯುತ್ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್ ನಡೆದಿತ್ತು. ಇದರಿಂದ ಸ್ಪೋಟ ಸಂಭವಿಸಿ ಬೆಂಕಿ ಹತ್ತಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಆಂಧ್ರದ ಚಿತ್ತೂರಿನ ಡೈರಿ ಘಟಕದಲ್ಲಿ ಅಮೋನಿಯಾ ಸೋರಿಕೆ: ಹಲವರು ಆಸ್ಪತ್ರೆಗೆ ದಾಖಲು

Advertisement

ಐದು ಮಂದಿ ಇಂಜಿನಿಯರ್ ಗಳು ಸೇರಿ ಸಿಬ್ಬಂದಿಗಳು ಸತತ ಎಂಟು ಗಂಟೆಯ ರಕ್ಷಣಾ ಕಾರ್ಯಾಚರಣೆ ನಡೆಸಿ ವಿಫಲವಾದ ನಂತರ ಇದೀಗ ತೆಲಂಗಾಣ ಸರ್ಕಾರ ಎನ್ ಡಿಆರ್ ಎಫ್ ಸಹಾಯವನ್ನು ಕೋರಿದೆ.

Advertisement

Udayavani is now on Telegram. Click here to join our channel and stay updated with the latest news.

Next