Advertisement

ಬಾಂಗ್ಲಾದೇಶ ವಿಮಾನ ನಿಲ್ದಾಣದ ಏರಿಂಡಿಯಾ ಕಚೇರಿಯಲ್ಲಿ ಬೆಂಕಿ

04:11 PM Aug 11, 2017 | Team Udayavani |

ಢಾಕಾ : ಇಲ್ಲಿನ ಬಾಂಗ್ಲಾದೇಶ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಏರಿಂಡಿಯಾ ಕಾರ್ಯಾಲಯದ ಒಳಗೆ ಇಂದು ಶುಕ್ರವಾರ ಬೆಂಕಿ ಕಾಣಿಸಿಕೊಂಡಿತೆಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಸುದ್ದಿ ತಿಳಿದು ಹಜರತ್‌ ಶಹಜ್‌ಲಾಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಧಾವಿಸಿ ಬಂದ ಹತ್ತು ಅಗ್ನಿ ಶಾಮಕ ಘಟಕಗಳು ಬೆಂಕಿಯನ್ನು ನಂದಿಸುವ ಕೆಲಸದಲ್ಲಿ ತೊಡಗಿಕೊಂಡವು.

ಏರಿಂಡಿಯಾ ಅಧಿಕಾರಿಯೋರ್ವರು ಹೇಳಿರುವ ಪ್ರಕಾರ ಬೆಂಕಿಯು ಏರ್‌ ಲೈನ್‌ನ ಕಾರ್ಯಾಲಯದಲ್ಲೇ ಕಾಣಿಸಿದೆ. ಆದರೆ ಅದಕ್ಕೆ ಕಾರಣವೇನೆಂಬುದನ್ನು ಅವರು ತಿಳಿಸಿಲ್ಲ. 

ವಿಮಾನ ನಿಲ್ದಾಣ ಕಟ್ಟಡದ ಮೂರನೇ ಅಂತಸ್ತಿನಲ್ಲಿ ಏರಿಂಡಿಯಾ ಮತ್ತು ಸೌದಿ ಏರ್‌ ಲೈನ್ಸ್‌ ಕಾರ್ಯಾಲಯಗಳಿವೆ. ಬೆಂಕಿ ಕಾಣಿಸಿಕೊಂಡದ್ದನ್ನು ಅನುಸರಿಸಿ ವಿಮಾನ ನಿಲ್ದಾಣ ಕ್ಕೆ ವಿದ್ಯುತ್‌ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಕಟ್ಟಡದ ಒಳಗೆ ಹೊಗೆ ಆವರಿಸಿಕೊಂಡದ್ದನ್ನು ಅನುಸರಿಸಿ ಪ್ರಯಾಣಿಕರನ್ನು ಮತ್ತು ಸಿಬಂದಿಗಳನ್ನು ಸ್ಥಳಾಂತರಿಸಲಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next