Advertisement

ದಿಲ್ಲಿ ಕಮಲಾ ಮಾರ್ಕೆಟ್‌ನಲ್ಲಿ ಭಾರೀ ಬೆಂಕಿ: 50 ಅಂಗಡಿ ಭಸ್ಮ

11:58 AM Oct 24, 2017 | Team Udayavani |

ಹೊಸದಿಲ್ಲಿ : ದಿಲ್ಲಿಯ ಕಮಲಾ ಮಾರ್ಕೆಟ್‌ನಲ್ಲಿ  ಭಾರೀ ಬೆಂಕಿ ಅನಾಹುತ ಸಂಭವಿಸಿದೆ. ಅನೇಕ ಅಂಗಡಿಗಳು, ಗೋದಾಮುಗಳು ಸುಟ್ಟು ಭಸ್ಮವಾಗಿವೆ. ಬೆಂಕಿ ನಂದಿಸುವ ಸಮರೋಪಾದಿಯ ಕೆಲಸದಲ್ಲಿ 25 ಅಗ್ನಿ ಶಾಮಕಗಳು ನಿರತವಾಗಿವೆ ಎಂದು ದಿಲ್ಲಿ ಅಗ್ನಿ ಶಾಮಕ ಸೇವೆಗಳ ಅಧಿಕಾರಿ ತಿಳಿಸಿದ್ದಾರೆ.

Advertisement

ಈ ಬೆಂಕಿ ಅವಘಡದಲ್ಲಿ ಯಾವುದೇ ಜೀವ ಹಾನಿಯಾಗಿರುವ ವರದಿಗಳು ಬಂದಿಲ್ಲ. ಸುಮಾರು 50 ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಬೆಂಕಿ ಅನಾಹುತಕ್ಕೆ ಕಾರಣವೇನೆಂದು ಗೊತ್ತಾಗಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

ನಸುಕಿನ 5.10ರ ಹೊತ್ತಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ; ಆದರೆ ತಣಿಸುವ ಕಾರ್ಯಾಚರಣೆ ಈಗಲೂ ಮುಂದುವರಿದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next