Advertisement

ದೆಹಲಿಯ ತುಘಲಕ್ ಬಾದ್ ಕೊಳಗೇರಿಯಲ್ಲಿ ಭಾರೀ ಅಗ್ನಿ ದುರಂತ: 1,200 ಗುಡಿಸಲುಗಳಿಗೆ ಬೆಂಕಿ

08:00 AM May 26, 2020 | Mithun PG |

ನವದೆಹಲಿ: ಇಲ್ಲಿನ ತುಘಲಕ್ ಬಾದ್ ಕೊಳಗೇರಿಯಲ್ಲಿ ಮಂಗಳವಾರ ಬೆಳಗ್ಗೆ  1 ಗಂಟೆ ಸುಮಾರಿಗೆ ಭಾರೀ ಪ್ರಮಾಣದ ಅಗ್ನಿ ಅನಾಹುತ ಸಂಭವಿಸಿದೆ.

Advertisement

ತುಘಲಕ್ ಬಾದ್ ಸ್ಲಂ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸುಮಾರು 1 ಗಂಟೆಗೆ ಕರೆ ಬಂದವು. ಕೂಡಲೇ ಎಲ್ಲಾ ಪೊಲೀಸ್ ಸಿಬ್ಬಂದಿಗಳು, ಅಗ್ನಿಶಾಮಕ ದಳ  ಸ್ಥಳಕ್ಕೆ ಧಾವಿಸಿದರು.  ಅದಾಗಲೇ 1000-1200 ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡಿದ್ದವು ಎಂದು  ಉಪಪೊಲೀಸ್ ಆಯುಕ್ತ ರಾಜೇಂದ್ರ ಪ್ರಸಾದ್ ಮೀನಾ ತಿಳೀಸಿದ್ದಾರೆ.

ಬೆಂಕಿ ದುರಂತ ಸಂಭವಿಸಿದ ತಕ್ಷಣ ಗುಡಿಸಲುಗಳಲ್ಲಿ ಮಲಗಿದ್ದವರು ಹೊರಕ್ಕೆ ಓಡಿ ಬಂದಿದ್ದಾರೆ. ಇಲ್ಲದಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಗಳಿದ್ದವು. ಆದರೆ ಈ ಅವಘಡಕ್ಕೆ ಕಾರಣಗಳೇನು  ಎಂಬುದು  ತಿಳಿದುಬಂದಿಲ್ಲ.

ಸ್ಥಳದಲ್ಲಿ 30 ಅಗ್ನಿಶಾಮಕ ವಾಹನಗಳಿದ್ದು ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರೆಸಿವೆ. ಬೆಂಕಿಯಿಂದ ಯಾವುದೇ ಸಾವು-ನೋವಿನ ವರದಿಯಾಗಿಲ್ಲ. ಮಾತ್ರವಲ್ಲದೆ ಅವಘಡದಲ್ಲಿ ಹಾನಿಗೊಳಗಾದ ಆಸ್ತಿಯ ಮೌಲ್ಗಯವನ್ನು ಅಂದಾಜಿಸಲಾಗಿಲ್ಲಎಂದು  ಪೊಲೀಸ್ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next