Advertisement

ಬೆಂಗಳೂರು : ಅಪಾರ್ಟ್’ಮೆಂಟ್ ಅಗ್ನಿ ದುರಂತಕ್ಕೆ ತಾಯಿ ಮಗಳು ಸಜೀವ ದಹನ

09:25 AM Sep 22, 2021 | Team Udayavani |

ಬೆಂಗಳೂರು :   ಸಿಲಿಂಡರ್‌ ಸೋರಿಕೆಯಿಂದ ಉಂಟಾದ ಎನ್ನಲಾದ ಅಗ್ನಿ ಅವಘಡದಲ್ಲಿ ಒಂದೇ ಫ್ಲ್ಯಾಟ್‌ ನಲ್ಲಿದ್ದ ತಾಯಿ, ಮಗಳು ಸಾರ್ವಜನಿಕರ ಕಣ್ಣೆದುರೆ ಸಜೀವ ದಹನವಾಗಿರುವ ಘಟನೆ ಇಲ್ಲಿನ ಬೇಗೂರು ಸಮೀಪದ ದೇವರಚಿಕ್ಕನಹಳ್ಳಿಯ ಆಶ್ರಿತ ಅಪಾರ್ಟ್‌ಮೆಂಟ್‌ ನಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.

Advertisement

ಅಪಾರ್ಟ್‌ ಮೆಂಟ್‌ನ ಮೂರನೇ ಮಹಡಿಯಲ್ಲಿರುವ 210ನೇ ಫ್ಲ್ಯಾಟ್‌ ನಲ್ಲಿ ವಾಸವಾಗಿದ್ದ ತಾಯಿ ಲಕ್ಷ್ಮಿ  ದೇವಿ (82) ಮತ್ತು ಅವರ ಪುತ್ರಿ ಭಾಗ್ಯರೇಖಾ (59) ಮೃತಪಟ್ಟವರು. ಭೀಮಾಸೇನ ಎಂಬ ಮತ್ತೂಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಜೀವ ದಹನ ಫ್ಲ್ಯಾಟ್‌ನ ಒಳಗಡೆ ಲಕ್ಷ್ಮಿ ದೇವಿ ಒಳಗಡೆ ಕುಳಿತಿದ್ದರು. ಈ ಸಂದರ್ಭ  ಏಕಾಏಕಿ ಸಿಲಿಂಡರ್‌ ಸೋರಿಕೆಯಿಂದ ಶಾರ್ಟ್‌ ಸರ್ಕ್ನೂ ಟ್‌ ನಿಂದ ಬೆಂಕಿ ಹೊತ್ತಿಕೊಂಡಿದ್ದು, ಇಡೀ ಫ್ಲ್ಯಾಟ್‌ ಆವರಿಸಿದೆ.

ಒಳಗಿದ್ದ ಲಕ್ಷ್ಮಿ ದೇವಿ ಅವರು ಹೊರ ಬರಲಾಗದೆ ಒಳಗಡೆಯೇ ಸಜೀವ ದಹನವಾಗಿದ್ದಾರೆ. ಇನ್ನು ಭಾಗ್ಯ ರೇಖಾ ಬಾಲ್ಕನಿಯಲ್ಲಿ ವಾಯುವಿಹಾರ ಮಾಡುತ್ತಿದ್ದು, ಬೆಂಕಿ ಹೊತ್ತಿಕೊಂಡ ಬಳಿಕ ಒಳಗಡೆ ಇರುವ ತಾಯಿ ರಕ್ಷಣೆಗೆ ಯತ್ನಿಸಿದರೂ ಸಾಧ್ಯವಾಗಿಲ್ಲ. ತಮ್ಮ ರಕ್ಷಣೆಗಾಗಿ ಬಾಲ್ಕನಿಯ ಗ್ರೀಲ್‌ ಅನ್ನು ಹಿಡಿದುಕೊಂಡು ಪಾರಾಗಲು ಯತ್ನಿಸಿದರೂ ಸಾರ್ವಜನಿ ಕರ ಮುಂದೆಯೇ ಸಜೀವ ದಹನವಾದರು.

ಅವಘಡದ ಮಾಹಿತಿ ಪಡೆದ ಅಗ್ನಿ ಶಾಮಕ ಸಿಬಂದಿ ಐದು ವಾಹನಗಳು ಮತ್ತು ಏಳು ರ್ಯಾಡರ್‌ ಗಳ ಜತೆ ಬಂದು ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿ ದ್ದಾರೆ. ಅನಂತರ ಎರಡು ಮೃತದೇಹಗಳನ್ನು ಫ್ಲ್ಯಾಟ್‌ ನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿ ಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next