Advertisement

Fire: ಬಾಂಗ್ಲಾದ ಬೃಹತ್‌ ಮಾರುಕಟ್ಟೆ ಕೇಂದ್ರಕ್ಕೆ ಬೆಂಕಿ

08:27 PM Apr 15, 2023 | Team Udayavani |

ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಪ್ರಖ್ಯಾತ ನ್ಯೂ ಸೂಪರ್‌ ಮಾರ್ಕೆಟ್‌ ಬೃಹತ್‌ ಸಂಕೀರ್ಣದಲ್ಲಿ ಶನಿವಾರ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಸಾವಿರಾರು ಮಳಿಗೆಗಳು ಹೊತ್ತಿ ಉರಿದಿವೆ. ಬೆಂಕಿ ನಂದಿಸಲು ದೇಶದ ಮಿಲಿಟರಿ ವ್ಯವಸ್ಥೆ ಹರಸಾಹಸ ಪಡುವಂತಾಗಿದೆ. ಢಾಕಾ ಕಾಲೇಜು ಸಮೀಪದಲ್ಲಿರುವ ನ್ಯೂ ಸೂಪರ್‌ ಮಾರ್ಕೆಟ್‌ ಸಂಕೀರ್ಣದ 2ನೇ ಹಂತಸ್ತಿನಲ್ಲಿ ಶನಿವಾರ ಮುಂಜಾನೆ 5.45ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಸಂಪೂರ್ಣ ಸಂಕೀರ್ಣಕ್ಕೆ ಬೆಂಕಿ ಆವರಿಸಿದ್ದು, ಸಾವಿರಾರು ಮಳಿಗೆಗಳು ಬೆಂಕಿಗೆ ಆಹುತಿಯಾಗಿವೆ.

Advertisement

ದೇಶದ ವಾಯುಪಡೆ, ಭೂಪಡೆ ಹಾಗೂ ನೌಕಾಪಡೆಗಳು ಕೂಡ ಬೆಂಕಿ ಆರಿಸಲು ಪ್ರಯತ್ನಿಸುತ್ತಿದ್ದು, ಫೈರ್‌ ಸರ್ವೀಸ್‌ನ 28 ಘಟಕಗಳನ್ನೂ ನಿಯೋಜಿಸಲಾಗಿದೆ. ಕಳೆದ ತಿಂಗಳಷ್ಟೇ ರಾಜಧಾನಿಯ ಇಂಥದ್ದೇ ಮತ್ತೂಂದು ಮಾರುಕಟ್ಟೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 23 ಮಂದಿ ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next