Advertisement

ಕಪ್ಪತಗುಡ್ಡಕ್ಕೆ ಮತ್ತೆ ಬೆಂಕಿ

11:04 AM Feb 07, 2018 | Team Udayavani |

ಗದಗ: ಮುಂಡರಗಿ ತಾಲೂಕಿನ ಡೋಣಿ ಗ್ರಾಮ ಸಮೀಪದ ಕಪ್ಪತಗುಡ್ಡಕ್ಕೆ ಮಂಗಳವಾರ ಸಂಜೆ ಬೆಂಕಿ ಬಿದ್ದಿದ್ದು, ವಿವಿಧ ರೀತಿಯ ಔಷಧಿ ಸಸ್ಯಗಳು ಹಾಗೂ ಜೀವಜಂತುಗಳು ಬಲಿಯಾಗಿವೆ. ಬೇಸಿಗೆ ಆರಂಭಕ್ಕೂ ಮುನ್ನವೇ ಅಗ್ನಿ ಅವಘಡ ಸಂಭವಿಸಿದೆ.

Advertisement

ಸಂಜೆ 6 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು ಅರ್ಧ ಗಂಟೆ ಹೊತ್ತಿ ಉರಿದಿದೆ. ಈ ವೇಳೆಗೆ ಕೆಲ ಎಕರೆ ಪ್ರದೇಶಗಳಷ್ಟು ಬೆಂಕಿ ಕೆನ್ನಾಲಿಗೆ ವ್ಯಾಪಿಸಿಕೊಂಡಿದ್ದು, ಈ ಭಾಗದಲ್ಲಿನ ಔಷಧಿ ಸಸ್ಯಗಳು ಹಾಗೂ ಜೀವ, ಜಂತುಗಳು ಬೆಂಕಿಗಾಹುತಿಯಾಗಿವೆ. ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಮುಂಡರಗಿ ಆರ್‌ಎಫ್‌ಒ ಮಹಾಂತೇಶ ನ್ಯಾಮತಿ, ಡೋಣಿ ಬಳಿ ಕೇವಲ ಒಂದೆರಡು ಎಕರೆ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಈ ಬಗ್ಗೆ ಮಾಹಿತಿ ಲಭ್ಯವಾದ 10 ನಿಮಿಷದಲ್ಲಿ ಇಲಾಖೆಯ ಸ್ಕ್ವಾಡ್‌ಗಳು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿದ್ದಾರೆ.

ಈ ಘಟನೆ ಸಂಭವಿಸಿದ ಪ್ರದೇಶದಲ್ಲಿ ದೋಣಿಯಿಂದ ಮತ್ತೂಂದು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಾಡ್‌ ರೋಡ್‌ನ‌ಲ್ಲಿ ಗ್ರಾಮಸ್ಥರು ಸಿಗರೇಟ್‌ ಸೇದಿ ಬಿಸಾಡಿದ್ದರಿಂದ ದುರ್ಘ‌ಟನೆ ಸಂಭವಿಸಿರುವ ಬಗ್ಗೆ ಸಂಶಯವಿದೆ. ಅರಣ್ಯದಲ್ಲಿ ಬೆಂಕಿ ಹಚ್ಚದಂತೆ ಸುತ್ತಲಿನ ಗ್ರಾಮಸ್ಥರಿಗೂ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next