Advertisement

ಬೆಂಕಿ ಆಕಸ್ಮಿಕ:ಹುಕ್ಕಾ ಪಾರ್ಲರ್‌ ನಿಷೇಧ ಬೇಡಿಕೆಗೆ ಮರುಜೀವ 

12:04 PM Jan 02, 2018 | |

ಮುಂಬಯಿ: ಶುಕ್ರವಾರ ನಗರದ ಕಮಲಾ ಮಿಲ್ಸ್‌ನಲ್ಲಿ  ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ  14 ಮಂದಿ  ಸಾವನ್ನಪ್ಪಿದ  ಹಿನ್ನೆಲೆಯಲ್ಲಿ  ಇದೀಗ  ನಗರದಲ್ಲಿ  ಹುಕ್ಕಾ ಪಾರ್ಲರ್‌ಗಳಿಗೆ  ನಿಷೇಧ  ಹೇರಬೇಕೆಂಬ  ಬೇಡಿಕೆಗೆ  ಮರುಜೀವ ಬಂದಿದೆ. 

Advertisement

ವಾರದ ಹಿಂದೆಯಷ್ಟೇ  ಬೃಹ ನ್ಮುಂಬಯಿ ಮಹಾನಗರ ಪಾಲಿಕೆ ಮೇಯರ್‌ ವಿಶ್ವನಾಥ ಮಹಾ ದೇಶ್ವರ  ಹುಕ್ಕಾ ಪಾರ್ಲರ್‌ಗಳನ್ನು  ಮುಚ್ಚಿಸು ವಂತೆ  ಮುಂಬಯಿ ಪೊಲೀಸ್‌  ಆಯುಕ್ತರಿಗೆ  ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಕಮಲಾ ಮಿಲ್ಸ್‌ ನಲ್ಲಿ  ಬೆಂಕಿ ಆಕಸ್ಮಿಕ ಸಂಭವಿಸಿ 14 ಮಂದಿ ಸಾವನ್ನಪ್ಪಿದ  ಘಟನೆ  ನಡೆದಿರುವ  ಹಿನ್ನೆಲೆಯಲ್ಲಿ ಬಿಎಂಸಿ ಇದೀಗ  ನಗರದಲ್ಲಿನ ಎಲ್ಲ ಕಟ್ಟಡಗಳ  ಥಾರಸಿಯಲ್ಲಿನ  ರೆಸ್ಟೋರೆಂಟ್‌ಗಳನ್ನು ಕೆಡವಲಾರಂಭಿಸಿದೆಯಲ್ಲದೆ  ನಗರದ ಲ್ಲಿನ ಹುಕ್ಕಾ ಪಾರ್ಲರ್‌ಗಳ  ಮೇಲೆ  ನಿರ್ಬಂಧ  ಹೇರುವಂತೆ ಪೊಲೀಸ್‌ ಇಲಾಖೆಯ ಮೇಲೆ ಒತ್ತಡ  ಹೇರಲು  ಮುಂದಾಗಿದೆ. 

ಪ್ರಸ್ತಾವನೆ ಸಲ್ಲಿಕೆ
ಭಾರತೀಯ ದಂಡ ಸಂಹಿತೆ ಮತ್ತು  ಕ್ರಿಮಿನಲ್‌ ದಂಡ ಸಂಹಿತೆಯ  ನಿಯಮಾವಳಿಗಳನ್ನು  ಬಳಸಿ  ಹುಕ್ಕಾ ಬಳಕೆಯನ್ನು  ನಿಷೇಧಿಸುವ ಪ್ರಸ್ತಾ ವನೆಯನ್ನು  ಆರೋಗ್ಯ ಸೇವೆಗಳ ನಿರ್ದೇಶನಾಲಯ ರಾಜ್ಯದ  ಆರೋಗ್ಯ ಇಲಾ ಖೆಯ  ಪ್ರಧಾನ ಕಾರ್ಯದರ್ಶಿಯವರಿಗೆ  ಕಳು ಹಿಸಿದ್ದಾರೆ. ಪಂಜಾಬ್‌ನಲ್ಲಿ  ಈಗಾಗ ಲೇ ಹುಕ್ಕಾ ಬಳಕೆಯನ್ನು  ವಿವಿಧ  ಕಾಯಿದೆ, ಕಾನೂನು ಗಳಡಿಯಲ್ಲಿ  ನಿರ್ಬಂಧಿಸಲಾಗಿದೆ. ಪ್ರಸಕ್ತ ವರ್ಷ  ಗುಜರಾತ್‌ ಮತ್ತು ದಿಲ್ಲಿಗಳಲ್ಲಿಯೂ  ಹುಕ್ಕಾವನ್ನು  ನಿಷೇಧಿಸಲಾಗಿದೆ. ಆರೋಗ್ಯ ಕಾರ್ಯಕರ್ತರ ಸ್ವಾಗತ, ಹುಕ್ಕಾ ಪಾರ್ಲರ್‌ ಮಾಲಕರ ವಿರೋಧ

ಹುಕ್ಕಾ ಬಳಕೆಯನ್ನು  ನಿಷೇಧಿಸುವ  ರಾಜ್ಯ ಸರಕಾರದ  ಪ್ರಸ್ತಾವನೆಯನ್ನು  ಆರೋಗ್ಯ ಕಾರ್ಯ ಕರ್ತರು  ಸ್ವಾಗತಿಸಿದ್ದರೆ  ಹುಕ್ಕಾ ಪಾರ್ಲರ್‌ಗಳ ಮಾಲಕರು ಮತ್ತು  ಹುಕ್ಕಾ  ಸೇವನೆದಾರರು ಸರಕಾರದ  ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರದ  ಸಿಗರೇಟು ಮತ್ತು ಇತರೆ  ತಂಬಾಕು ಉತ#ನ್ನಗಳ ಕಾಯಿದೆ(ಸಿಒಟಿಪಿಎ)ಗೆ  ತಿದ್ದುಪಡಿ  ತಾರದೇ  ರಾಜ್ಯ ಸರಕಾರ  ಹುಕ್ಕಾವನ್ನು  ನಿಷೇಧಿಸಲು  ಸಾಧ್ಯವಿಲ್ಲ  ಎಂಬುದು  ಇವರ  ವಾದವಾಗಿದೆ.

ಹುಕ್ಕಾ ಪಾರ್ಲರ್‌ಗಳನ್ನು  ತೆರೆಯಲು ವಿಶೇಷ  ಲೈಸೆನ್ಸ್‌   ಪಡೆದುಕೊಳ್ಳುವ ಅಗತ್ಯವಿಲ್ಲದೇ ಇರುವುದರಿಂದ  ರಾಜ್ಯದಲ್ಲಿ  ಸದ್ಯ ಕಾರ್ಯಾ ಚರಿಸುತ್ತಿರುವ  ಹುಕ್ಕಾ ಪಾರ್ಲರ್‌ಗಳ ಬಗೆಗೆ  ಸರಕಾರಕ್ಕೆ  ಸೂಕ್ತ ಮಾಹಿತಿ ಇಲ್ಲವಾಗಿದೆ ಎಂದು  ಆಹಾರ್‌ನ  ಅಧ್ಯಕ್ಷರಾದ  ಅರವಿಂದ ಶೆಟ್ಟಿ  ತಿಳಿಸಿದರು. ನಗರದಲ್ಲಿನ ಸುಮಾರು  7,000 ಹೊಟೇಲ್‌ ಮತ್ತು ರೆಸ್ಟೋರೆಂಟ್‌ಗಳು  ಆಹಾರ್‌ನೊಂದಿಗೆ  ನೋಂದಣಿಗೊಂಡಿದ್ದು  ಈ  ಪೈಕಿ  ಕೆಲವೇ ಕೆಲವು  ಹೊಟೇಲ್‌ಗ‌ಳಲ್ಲಿ  ಹುಕ್ಕಾ ಪಾರ್ಲರ್‌ಗಳು  ಕಾರ್ಯಾಚರಿಸುತ್ತಿವೆ ಎಂದರು. 

Advertisement

ಸುಪ್ರೀಂ ಆದೇಶದ ಬೆಂಗಾವಲು
2011ರಲ್ಲಿ  ಬಿಎಂಸಿಯು ರೆಸ್ಟೋರೆಂಟ್‌ಗಳಲ್ಲಿ  ಧೂಮಪಾನ ವಲಯಗಳಿಗೆ ಸಂಬಂಧಿಸಿದ ನಿಯಮಾವಳಿಗಳಲ್ಲಿ  ಬದಲಾವಣೆ ಮಾಡಿತ್ತಲ್ಲದೆ  ಹುಕ್ಕಾ  ಪೂರೈಕೆ  ನಿರ್ಬಂಧಿಸಿತ್ತು. 
ಅಲ್ಲದೆ  ಈ ವಲಯಗಳಿಗೆ  ಏನನ್ನೂ  ಪೂರೈಸುವಂತಿಲ್ಲ  ಎಂದು  ಸ್ಪಷ್ಟಪಡಿಸಿತ್ತು. ಬಿಎಂಸಿಯ  ಈ ಸುತ್ತೋಲೆಯನ್ನು  ಹೈಕೋರ್ಟ್‌  ಎತ್ತಿಹಿಡಿದಿತ್ತಾದರೂ  ಸುಪ್ರೀಂ ಕೋರ್ಟ್‌  ಇದನ್ನು  ರದ್ದುಗೊಳಿಸಿತ್ತು. 
ಸುಪ್ರೀಂಕೋರ್ಟ್‌  ತನ್ನ ಆದೇಶದಲ್ಲಿ  ಹುಕ್ಕಾದ  ಸಹಿತ ಎಲ್ಲಾ ತೆರನಾದ  ಧೂಮಪಾನವನ್ನು  ಈ  ವಲಯಗಳಲ್ಲಿ  ಸೇವಿಸಲು  ಅವಕಾಶ  ನೀಡಿತ್ತು ಎಂದು  ನಗರದಲ್ಲಿನ “ಕಾಸ್ಮಿಕ್‌’ ರೆಸ್ಟೋರೆಂಟ್‌ ಕಮ್‌ ಹುಕ್ಕಾ ಪಾರ್ಲರ್‌ನ ಮಾಲಕರಾದ  ರೋಮಿ ಚಡಾ ಅಭಿಪ್ರಾಯಪಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next