Advertisement

ಕುಸ್ತಿ ಪಟು ಸುಶೀಲ್‌ ಕುಮಾರ್‌, ಬೆಂಬಲಿಗರ ವಿರುದ್ಧ FIR

12:17 PM Dec 30, 2017 | Team Udayavani |

ಹೊಸದಿಲ್ಲಿ : ಕುಸ್ತಿಪಟು ಸುಶೀಲ್‌ ಕುಮಾರ್‌ ಅವರ ಬೆಂಬಲಿಗರು ಎದುರಾಳಿ ಕುಸ್ತಿಪಟು ಪ್ರವೀಣ್‌ ರಾಣಾ ಅವರ ಮೇಲೆ ಹಲ್ಲೆ ನಡೆಸಿದ ಒಂದು ದಿನದ ತರುವಾಯ ಇಂದು ಶನಿವಾರ ದಿಲ್ಲಿ ಪೊಲೀಸರು ಸುಶೀಲ್‌ ಕುಮಾರ್‌ ಮತ್ತು ಅವರ ಬೆಂಬಲಿಗರ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡರು.

Advertisement

ಸುಶೀಲ್‌ ಕುಮಾರ್‌ ಅವರ ಬೆಂಬಲಿಗರು ಪ್ರವೀಣ್‌ ರಾಣಾ ಮತ್ತು ಅವರ ಬೆಂಬಲಿಗರ ಮೇಲೆ ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ   ಹಲ್ಲೆ ಮಾಡಿದ ಘಟನೆ ಸಂಬಂಧವಾಗಿ ದಿಲ್ಲಿ ಪೊಲೀಸರು ಐಪಿಸಿ ಸೆ.323 ಮತ್ತು 341ರ ಪ್ರಕಾರ ಕೇಸು ದಾಖಲಿಸಿಕೊಂಡದರು. 

ಎರಡು ಒಲಿಂಪಿಕ್‌ ಮೆಡಲ್‌ ವಿಜೇತ ಸುಶೀಲ್‌ ಅವರು ಮುಂದಿನ ವರ್ಷದ ಕಾಮನ್ವೆಲ್ತ್‌ ಗೇಮ್ಸ್‌ಗೆ ಅರ್ಹತೆ ಪಡೆದ ಕುಸ್ತಿ ಪಂದ್ಯವು, ಸುಶೀಲ್‌ ಕುಮಾರ್‌ ಮತ್ತು ಎದುರಾಳಿ ಪ್ರವೀಣ್‌ ರಾಣಾ ಅವರ ಬೆಂಬಲಿಗರ ನಡುವೆ ವಸ್ತುತಃ  ಕಾಳಗವನ್ನೇ  ಕಂಡಿತು. 

ಕಾಮನ್ವೆಲ್ತ್‌ ಚಾಂಪ್ಯನ್‌ಶಿಪ್‌ ಚಿನ್ನದ ಪದಕವನ್ನು ಗೆದ್ದು ಮೂರು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಅಖಾಡೆಗೆ ಮರಳಿರುವ ಸುಶೀಲ್‌ ಕುಮಾರ್‌ 74 ಕೆಜಿ ವಿಭಾಗದಲ್ಲಿನ ಎಲ್ಲ ಸವಾಲುಗಳನ್ನು ಗೆದ್ದರು. 

ಸುಶೀಲ್‌ ಎದುರಿನ ಸೆಮಿ ಫೈನಲ್‌ ಪಂದ್ಯವನ್ನು ಎದುರಾಳಿ ಪ್ರವೀಣ್‌ ರಾಣಾ ಸೋತಾಗ ಅವರ ಅಭಿಮಾನಿ ಬೆಂಬಲಿಗರು ಸಂಯಮವನ್ನು ಕಳೆದುಕೊಂಡು ಸುಶೀಲ್‌ ಅಭಿಮಾನಿಗಳ ಮೇಲೇರಿ ಹೋದರು ಎಂದು ವರದಿಯಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next