ರಾಯ್ಪುರ: ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆ ನಂದಕುಮಾರ್ ಬಘೇಲ್ ವಿರುದ್ಧ ಛತ್ತೀಸ್‌ಗಡ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಬ್ರಾಹ್ಮಣರ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದೇ ಇದಕ್ಕೆ ಕಾರಣ.
ಇತ್ತೀಚೆಗೆ ಉ.ಪ್ರದೇಶದಲ್ಲಿ ನಂದ ಕುಮಾರ್ ಭಾಷಣ ವೊಂದರಲ್ಲಿ, ದೇಶದ ಎಲ್ಲ ಗ್ರಾಮಗಳ ಜನರು ತಮ್ಮ ಊರಿ ನೊಳಗೆ ಬ್ರಾಹ್ಮಣರು ಪ್ರವೇಶಿಸದಂತೆ ತಡೆಯಬೇಕು.
ಬ್ರಾಹ್ಮಣರನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ನಾನು ಎಲ್ಲ ಜನಾಂಗದವರೊಂದಿಗೆ ಚರ್ಚಿಸುತ್ತೇನೆ ಎಂದಿದ್ದರು. ಇದನ್ನು ಖಂಡಿಸಿ ಸರ್ವ ಬ್ರಾಹ್ಮಣ ಸಮಾಜ ದೂರು ದಾಖಲಿಸಿತ್ತು.
ಇದನ್ನೂ ಓದಿ:ಕಿಷ್ಕಿಂದಾ ಅಂಜನಾದ್ರಿ ಬೆಟ್ಟದಲ್ಲಿ ಶ್ರೀ ಆಂಜನೇಯನ ದರ್ಶನ ಸಿಗದೆ ಹಿಂತಿರುಗಿದ ನಟ ಪುನೀತ್
ತಂದೆಯ ವಿರುದ್ಧ ಎಫ್ಐಆರ್ ದಾಖಲು ಹಿನ್ನೆಲೆ ಪ್ರತಿಕ್ರಿಯಿಸಿರುವ ಸಿಎಂ ಬಘೇಲ್, ಕಾನೂನಿಗಿಂತ ಯಾರೂ ಮೇಲಲ್ಲ. ಮಗನಾಗಿ ನನಗೆ ಅವರ ಮೇಲೆ ಗೌರವ ಇದೆ. ಆದರೆ ಅವರ ಹೇಳಿಕೆಯ ಬಗ್ಗೆ ಅಸಮಾಧಾನವಿದೆ. ನಮ್ಮ ರಾಜ್ಯ ದಲ್ಲಿ ಎಲ್ಲ ಜನಾಂಗ, ಧರ್ಮಕ್ಕೂ ಸಮಾನ ಗೌರವವಿದೆ ಎಂದು ಹೇಳಿದ್ದಾರೆ.