Advertisement

800 ಕೋಟಿ ರೂ. ವಂಚನೆ: Rotomac promoter ವಿರುದ್ಧ ಎಫ್ಐಆರ್‌

12:03 PM Feb 19, 2018 | Team Udayavani |

ಹೊಸದಿಲ್ಲಿ : 800 ಕೋಟಿ ರೂ. ವಂಚನೆಗೈದಿರುವುದಾಗಿ ಬ್ಯಾಂಕ್‌ ಆಫ್ ಬರೋಡ ನೀಡಿದ ದೂರಿನ ಅನ್ವಯ ಸಿಬಿಐ ಇಂದು ರೋಟೋಮ್ಯಾಕ್‌ ಪೆನ್‌ ಪ್ರಮೋಟರ್‌ ವಿಕ್ರಮ್‌ ಕೊಠಾರಿ ವಿರುದ್ಧ ಎಫ್ಐಆರ್‌ ದಾಖಲಿಸಿತೆದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಇಂದು ನಸುಕಿನ ವೇಳೆಯಲ್ಲಿ ಕೊಠಾರಿಯ ಕಾನ್ಪುರ ನಿವಾಸ ಮತ್ತು ಕಚೇರಿಗೆ ದಾಳಿ ಮಾಡಿದ ಸಿಬಿಐ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಂಡಿತು. ಆದರೆ ಈ ತನಕ ಯಾರನ್ನೂ ಬಂಧಿಸಲಾಗಿಲ್ಲ ಎಂದು ಸಿಬಿಐ ವಕ್ತಾರ ಅಭಿಷೇಕ್‌ ದಯಾಳ್‌ ಹೇಳಿದರು. 

ಕೊಠಾರಿ, ಅವರ ಪತ್ನಿ ಮತುತ ಪುತ್ರನನ್ನು ಸಿಬಿಐ ಪ್ರಶ್ನಿಸುತ್ತಿದೆ ಎಂದವರು ಹೇಳಿದರು. 

ನೀರವ್‌ ಮೋದಿ ಪಂಜಾಬ್‌ ನ್ಯಾಶನಲ್‌ ಬ್ಯಾಂಗಿಗೆ  11,400 ಕೋಟಿ ರೂ. ವಂಚಿಸಿದ ಬೆನ್ನಿಗೇ ಬೆಳಕಿಗೆ ಬಂದಿರುವ ಎರಡನೇ ಅತೀ ದೊಡ್ಡ ಹಣಕಾಸು ವಂಚನೆ ಹಗರಣ ಇದಾಗಿದೆ. 

ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್‌ ಮೋದಿ, ಆತನ ಚಿಕ್ಕಪ್ಪ ಮೆಹುಲ್‌ ಚೋಕ್ಸಿ (ಗೀತಾಂಜಲಿ ಜೆಮ್ಸ್‌ ಸಮೂಹ ಕಂಪೆನಿಗಳ ಪ್ರಮೋಟರ್‌) ಈಗಾಗಲೇ ವಿದೇಶಕ್ಕೆ ಪಲಾಯನ ಮಾಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next