Advertisement

Waqf ಬೋರ್ಡ್‌ನಲ್ಲೂ ಭಾರೀ ಅವ್ಯವಹಾರ!  ವಾಲ್ಮೀಕಿ ಹಗರಣದ ಮಾದರಿಯಲ್ಲೇ ಅಕ್ರಮ ಹಣ ವರ್ಗ

01:25 AM Jul 15, 2024 | Team Udayavani |

ಬೆಂಗಳೂರು: ವಾಲ್ಮೀಕಿ ನಿಗಮದ ನೂರಾರು ಕೋ. ರೂ. ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಯುತ್ತಿರುವ ಹೊತ್ತಿನಲ್ಲೇ ಅದೇ ಮಾದರಿಯಲ್ಲಿ ರಾಜ್ಯ ವಕ್ಫ್ ಬೋರ್ಡ್‌ನಲ್ಲೂ ಕೋಟ್ಯಂತರ ರೂ. ಹಣ ಅಕ್ರಮ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ.

Advertisement

ರಾಜ್ಯ ವಕ್ಫ್ ಬೋರ್ಡ್‌ನ ಮುಖ್ಯ ಲೆಕ್ಕಾಧಿಕಾರಿ ಅಹಮ್ಮದ್‌ ಅಬ್ಟಾಸ್‌ ನೀಡಿದ ದೂರಿನ ಮೇರೆಗೆ ಹೈಗ್ರೌಂಡ್ಸ್‌ ಠಾಣೆ ಪೊಲೀಸರು ವಕ್ಫ್ ಬೋರ್ಡ್‌ನ ಮಾಜಿ ಸಿಇಒ ಝುಲ್ಫಿಕಾರುಲ್ಲಾ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ದೂರಿನಲ್ಲಿ ಏನಿದೆ?
ರಾಜ್ಯ ವಕ್ಫ್ ಮಂಡಳಿಯ ಕಲಬುರಗಿ ದರ್ಗಾಕ್ಕೆ ಸೇರಿದ ಆಸ್ತಿಯನ್ನು ರಾಜ್ಯ ಸರಕಾರ ಒತ್ತುವರಿ ಮಾಡಿದ್ದ ಹಿನ್ನೆಲೆಯಲ್ಲಿ ಮಂಡಳಿಗೆ 2.29 ಕೋಟಿ ರೂ. ನೀಡಿತ್ತು. ಅಲ್ಲದೆ ಮುಜರಾಯಿ ಇಲಾಖೆ ಕೂಡ ಮಂಡಳಿಗೆ 1.79 ಕೋಟಿ ರೂ. ನೀಡಿತ್ತು.

ಈ ಮೂಲಕ ಬಂದ ಒಟ್ಟು 4 ಕೋಟಿ ರೂ. ರಾಜ್ಯ ವಕ್ಫ್ ಮಂಡಳಿಯ ಬೆನ್ಸನ್‌ ಟೌನ್‌ ಇಂಡಿಯನ್‌ ಬ್ಯಾಂಕ್‌ನಲ್ಲಿರುವ ಉಳಿತಾಯ ಖಾತೆಗೆ ಜಮೆ ಮಾಡಲಾಗಿತ್ತು. ಆದರೆ ಈ ಸಂದರ್ಭದಲ್ಲಿ ಬೋರ್ಡ್‌ನ ಅಂದಿನ ಸಿಇಒ ಆಗಿದ್ದ ಝುಲ್ಫಿಕಾರುಲ್ಲಾ 2016ರ ನ. 26ರಂದು ಈ ಹಣವನ್ನು ವಕ್ಫ್ ಮಂಡಳಿ ಚಿಂತಾಮಣಿಯ ವಿಜಯ ಬ್ಯಾಂಕ್‌ನಲ್ಲಿ ಹೊಂದಿರುವ ಖಾತೆಗೆ ಎರಡು ಚೆಕ್‌ಗಳ ಮೂಲಕ ವರ್ಗಾಯಿಸಿದ್ದರು. ಅಲ್ಲದೆ ಈ ಹಣವನ್ನು ನಿಶ್ಚಿತ ಠೇವಣಿ ಇರಿಸುವಂತೆ ಬ್ಯಾಂಕ್‌ಗೆ ಸೂಚಿಸಿದ್ದರು. ಈ ಹಣ ವರ್ಗಾವಣೆ ಹಾಗೂ ನಿಶ್ಚಿತ ಠೇವಣಿಗೆ ಸೂಚಿಸಿರುವ ವಿಚಾರವನ್ನು ಝಲ್ಫಿಕಾರುÇÉಾ ಅವರು ವಕ್ಫ್ ಮಂಡಳಿಯ ಗಮನಕ್ಕೆ ತಂದಿರಲಿಲ್ಲ. ಅದರಿಂದ ವಕ್ಫ್ ಮಂಡಳಿಗೆ 8.03 ಕೋಟಿ ರೂ. ನಷ್ಟವಾಗಿತ್ತು ಎಂದು ದೂರುದಾರರಾದ ಅಹಮ್ಮದ್‌ ಅಬ್ಟಾಸ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನೋಟಿಸ್‌ಗೆ ಸಮರ್ಪಕ ಉತ್ತರ ನೀಡಿಲ್ಲ
ಈ ರೀತಿ ಬೋರ್ಡ್‌ನ ಕೋಟ್ಯಂತರ ರೂ. ಅಕ್ರಮ ವಾಗಿ ವರ್ಗಾವಣೆ ಆದ ಬೆನ್ನಲ್ಲೇ 2022ರ ಮಾರ್ಚ್‌ 31ರಂದು ವಕ್ಫ್ ಮಂಡಳಿ ಸಭೆಯಲ್ಲಿ ಈ ಹಣ ವರ್ಗಾ ವಣೆ ವಿಚಾರ ಚರ್ಚೆಗೆ ಬಂದಿದ್ದು, ಮಂಡಳಿಗೆ ನಂಬಿಕೆ ದ್ರೋಹ ಮಾಡಿ ಆರ್ಥಿಕ ನಷ್ಟವನ್ನುಂಟು ಮಾಡಿರುವ ಮಾಜಿ ಸಿಇಒ ಝಲ್ಫಿಕಾರುಲ್ಲಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ಹಣ ವರ್ಗಾವಣೆ ಬಗ್ಗೆ ಝಲ್ಪಿಕಾರುಲ್ಲಾಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಆದರೆ ಅವರು ನೋಟಿಸ್‌ಗೆ ಸರಿಯಾದ ಉತ್ತರ ನೀಡಿರಲಿಲ್ಲ. ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದಾಗ, ರಾಜ್ಯ ಅಲ್ಪಸಂಖ್ಯಾಕರ ಕಲ್ಯಾಣ, ಹಜ್‌ ಮತ್ತು ವಕ್ಫ್ ಇಲಾಖೆ ಕಾರ್ಯದರ್ಶಿಯವರು ಝಲ್ಫಿಕಾರುಲ್ಲಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ 2024ರ ಜೂನ್‌ 12ರಂದು ಸೂಚನೆ ನೀಡಿದ್ದರು ಎಂದು ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಲೆಕ್ಕಾಧಿಕಾರಿ ಅಹಮ್ಮದ್‌ ಅಬ್ಟಾಸ್‌ ದೂರಿನಲ್ಲಿ ತಿಳಿಸಿದ್ದಾರೆ.

Advertisement

ಸಿಐಡಿಯಿಂದ ಆರೋಪಪಟ್ಟಿ ಸಲ್ಲಿಕೆ?
ಝುಲ್ಫಿಕಾರುಲ್ಲಾ ವಿರುದ್ಧ ಇದೇ ಆರೋಪದಡಿ 2017ರಲ್ಲಿ ಪ್ರಕರಣ ದಾಖಲಾಗಿತ್ತು. ಅದನ್ನು ಅಂದಿನ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ ಆರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಹೀಗಾಗಿ ಆರೋಪಪಟ್ಟಿಯ ವರದಿಯನ್ನು ಸಿಐಡಿಗೆ ನೀಡುವಂತೆ ಕೋರಲಾಗಿದೆ. ಆ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಈ ಮಧ್ಯೆ ಹೆಚ್ಚುವರಿಯಾಗಿ ಝುಲ್ಫಿಕಾರುಲ್ಲಾ ವಿರುದ್ಧ ದೂರು ನೀಡಿದ್ದಾರೆ. ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next