Advertisement

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಶಿಕ್ಷಕ ನಾಪತ್ತೆ; ಎಫ್ಐಆರ್‌

03:06 PM Mar 18, 2017 | Team Udayavani |

ಬಾರಿಪಾಡಾ : ತನ್ನ ಮೇಲೆ ಅತ್ಯಾಚಾರಗೈದ ಕಾಲೇಜು ಶಿಕ್ಷಕನ ವಿರುದ್ಧ ವಿದ್ಯಾರ್ಥಿನಿಯು ಎಫ್ಐಆರ್‌ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆಗೆ ಮುಂದಾಗಿರುವಂತೆಯೇ ಆರೋಪಿ ಶಿಕ್ಷಕನು ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.

ಕಳೆದ ಮಾರ್ಚ್‌ 12ರಂದು ತಾನು ಟ್ಯೂಶನ್‌ಗೆಂದು ಶಿಕ್ಷಕನ ಮನೆಗೆ ಹೋಗಿದ್ದಾಗ ಅಲ್ಲಿ ಆತ ತನ್ನ ಮೇಲೆ ಅತ್ಯಾಚಾರ ಎಸಗಿದ್ದ ಎಂದು ವಿದ್ಯಾರ್ಥಿನಿಯು ದೂರಿದ್ದಾಳೆ. ಈ ಬಗ್ಗೆ ಆಕೆ ಕಾಲೇಜು ಆಡಳಿತ ಮಂಡಳಿಗೆ ದೂರು ಕೊಟ್ಟಿದ್ದಳು. ಆ ಪ್ರಕಾರ ಅವರು ಗುತ್ತಿಗೆ ಆಧಾರಿತನಾಗಿರುವ ಆರೋಪಿ ಶಿಕ್ಷಕನನ್ನು ಕೂಡಲೇ ಕೆಲಸದಿಂದ ವಜಾ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next