Advertisement

ದಲಿತ ಮಹಿಳೆಯರ ಹಲ್ಲೆ: ಬಿಜೆಪಿ ಶಾಸಕನ ವಿರುದ್ಧ ಎಫ್ಐಆರ್‌

04:26 PM Mar 12, 2018 | udayavani editorial |

ಡೆಹರಾಡೂನ್‌: ಉತ್ತರಾಖಂಡದ ರುದ್ರಪುರ ಶಾಸಕ ರಾಜ್‌ ಕುಮಾರ್‌ ತುಕ್ರಾಲ್‌ ವಿರುದ್ಧ ಎಫ್ಐಆರ್‌ ದಾಖಲಾಗಿದೆ; ಮೂವರು ದಲಿತ ಮಹಿಳೆಯರ ಮೇಲೆ ಹಲ್ಲೆ ಮಾಡಿ ಅವರನ್ನು ನಿಂದಿಸಿದ ಆರೋಪ ತುಕ್ರಾಲ್‌ ಮೇಲಿದೆ.

Advertisement

ಎರಡು ಕುಟುಂಬಗಳ ನಡುವಿನ ಜಗಳವನ್ನು ಇತ್ಯರ್ಥ ಪಡಿಸಲು ಕಳೆದ ಮಾರ್ಚ್‌ 9ರಂದು ಶಾಸಕ ತುಕ್ರಾಲ್‌ ರಾಜಿ ಮಾತುಕತೆಗೆ ಹೋಗಿದ್ದಾಗ ಮಾತಿನ ಜಗಳದ ಪರಾಕಾಷ್ಠೆಯಲ್ಲಿ ಶಾಸಕ ತುಕ್ರಾಲ್‌, ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳ ಮೇಲೆ ಹಲ್ಲೆ ನಡೆಸಿದರೆಂಬ ದೂರನ್ನು ದಾಖಲಿಸಲಾಗಿತ್ತು. ಆ ಪ್ರಕಾರ ತುಕ್ರಾಲ್‌ ವಿರುದ್ಧ ರುದ್ರಪುರ ಪೊಲೀಸ್‌ ಠಾಣೆಯಲ್ಲಿ FIR ದಾಖಲಾಗಿದೆ. 

ಈ ನಡುವೆ ಶಾಸಕರು ಹಲ್ಲೆ ಮಾಡಿದರೆಂಬ ವಿಡಿಯೋ ಒಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next