ಕೋವಿಡ್ ಭೀತಿಯಲ್ಲಿದ್ದ ಜನತೆಗೆ ಕೊಂಚ ರಿಲ್ಯಾಕ್ಟ್ ನೀಡಿದ್ದ ಲಸಿಕೆ. ಮಹಾಮಾರಿ ವಿರುದ್ಧ ಹೋರಾಟಕ್ಕೆ ಲಸಿಕಾ ಅಭಿಯಾನಗಳು ಸಹಕಾರಿಯಾಗಿದ್ದು ಸುಳ್ಳಲ್ಲ. ಆದರೆ, ಕೆಲವೊಂದು ಕಡೆ ಲಸಿಕೆ ಪಡೆಯಲು ಹಿಂದೇಟು ಹಾಕಿದ ಪ್ರಕರಣಗಳು ನಡೆದವು. ಹೀಗಾಗಿ ಸರ್ಕಾರಗಳು, ಎನ್ ಜಿಒ ಗಳು ಲಸಿಕೆ ಕುರಿತು ಜಾಗೃತಿ ಮೂಡಿಸಿದವು. ಇದೀಗ ಫಿನ್ಲೆಂಡ್‌ನ ಹಾರ್ಡ್‌ರಾಕ್ ಬ್ಯಾಂಡ್ ಕಲಾವಿದ ಟೋಮಿ ಪೆಟ್ಟೆರಿ ಪುಟಾನ್ಸೂ ವಿಭಿನ್ನವಾಗಿ ಜಾಗೃತಿ ಮೂಡಿಸುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾನೆ.
ಮಿಸ್ಟರ್ ಲಾರ್ಡಿ ಎಂದು ಖ್ಯಾತಿ ಪಡೆದಿರುವ ಈ ಗೀತ ರಚನಕಾರ ಹಾಗೂ ಗಾಯಕ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಈ ವೇಳೆ ಅವರು ವಿಭಿನ್ನ ಗೆಟಪ್ ಹಾಕಿಕೊಂಡು ಲಸಿಕಾ ಕೇಂದ್ರಕ್ಕೆ ಆಗಮಿಸಿ ಗಮನ ಸೆಳೆದಿದ್ದಾರೆ. ಸದ್ಯ ಅವರು ಈ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಟೋಮಿ ಪೆಟ್ಟೆರಿ ಪುಟಾನ್ಸೂ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆಯಲು ವಿಶಿಷ್ಟವಾದ ಕಾಸ್ಟ್ಯೂಮ್‌ನಲ್ಲಿ ಆಗಮಿಸಿದ ಅವರು ಜಾಗೃತಿ ಮೂಡಿಸಿದ್ದಾರೆ.
ಲಸಿಕೆ ಪಡೆದಿರುವ ಕುರಿತು ಮಾತನಾಡಿದ ಲಾರ್ಡಿ, ಅವರು ನನ್ನ ತೋಳಿಗೆ ಸೂಚಿ ಚುಚ್ಚಿದರು. ಅದಕ್ಕಾಗಿಯೇ ನಾ ಇಲ್ಲಿಗೆ ಬಂದಿದ್ದೇನೆ ಎಂದಿದ್ದಾರೆ.
ಇನ್ನು ಕೋವಿಡ್ ಮಹಾಮಾರಿಯಿಂದ ನನ್ನ ಯೋಜಿತ ಪ್ರವಾಸಗಳು ರದ್ದಾದವು. ಹೀಗಾಗಿ ಈ ಸಮಯವನ್ನು ಒಳ್ಳೆಯ ಕೆಲಸ ಕಾರ್ಯಗಳಿಗೆ ವಿನಿಯೋಗಿಸಿದೆ ಎಂದು ನುಡಿದಿದ್ದಾರೆ ಲಾರ್ಡಿ.
47 ವರ್ಷದ ಈ ಕಲಾವಿದನ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.