Advertisement

Finland ಶಾಲೆಯಲ್ಲಿ ಶೂಟೌಟ್‌: ವಿದ್ಯಾರ್ಥಿ ಸಾವು; ಇಬ್ಬರಿಗೆ ಗಾಯ

07:35 PM Apr 02, 2024 | Team Udayavani |

ಹೆಲ್ಸೆಂಕಿ: ಫಿನ್ಲಂಡ್‌ನ‌ ಶಾಲೆಯಲ್ಲಿ 12 ವರ್ಷದ ವಿದ್ಯಾರ್ಥಿ ಮನ ಬಂದಂತೆ ಗುಂಡು ಹಾರಿಸಿದ್ದರಿಂದ ವಿದ್ಯಾರ್ಥಿ ಅಸುನೀಗಿದ್ದಾನೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಕೃತ್ಯವೆಸಗಿದ ವಿದ್ಯಾರ್ಥಿಯನ್ನು ಸೆರೆಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಧಾನಿ ಹೆಲ್ಸೆಂಕಿಯ ಉತ್ತರ ಭಾಗದ ವಂತಾ ಎಂಬಲ್ಲಿರುವ ಶಾಲೆಯಲ್ಲಿ ಈ ಘಟನೆ ನಡೆದಿದೆ. ಅದರಲ್ಲಿ 800 ವಿದ್ಯಾರ್ಥಿಗಳು, 90 ಮಂದಿ ಸಿಬ್ಬಂದಿಗಳಿದ್ದಾರೆ. ಈ ಘಟನೆಯಿಂದ ಆಘಾತಗೊಂಡಿರುವುದಾಗಿ ಪ್ರಧಾನಿ ಪೆಟ್ಟೆರಿ ಆರ್ಪೋ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next