ಹೆಲ್ಸಿಂಕಿ: ತೆರಿಗೆದಾರರ ಹಣವನ್ನು ಬಳಸಿ ಫಿನ್ ಲ್ಯಾಂಡ್ ಪ್ರಧಾನಮಂತ್ರಿಯ ಬ್ರೇಕ್ ಫಾಸ್ಟ್ (ಉಪಹಾರದ) ಬಿಲ್ ಗೆ ಅಕ್ರಮವಾಗಿ ಸಬ್ಸಿಡಿ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಆ ಬಗ್ಗೆ ತನಿಖೆ ನಡೆಸುವುದಾಗಿ ಫಿನ್ ಲ್ಯಾಂಡ್ ಪೊಲೀಸರು ಶುಕ್ರವಾರ(ಮೇ 28) ಘೋಷಿಸಿದ್ದಾರೆ.
ಇದನ್ನೂ ಓದಿ:ಚಿತ್ರದುರ್ಗ: ಪತ್ನಿಗೆ ಕೋವಿಡ್ ಪಾಸಿಟಿವ್; ಹೆದರಿದ ಗಂಡ ನೇಣಿಗೆ ಶರಣು!
ಫಿನ್ ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ಗೆ ಮಂಗಳವಾರ ದಿಢೀರ್ ಶಾಕ್ ನೀಡಿದ ಘಟನೆ ನಡೆದಿತ್ತು. ಅದಕ್ಕೆ ಕಾರಣವಾಗಿದ್ದು, ಇಲ್ಟಾಲೆಹ್ತಿ ಟ್ಯಾಬ್ಲೊಯ್ಡ್ ನಲ್ಲಿ ಪ್ರಕಟವಾದ ವರದಿ! ಹೌದು ಅಧಿಕೃತ ಸರ್ಕಾರಿ ನಿವಾಸದಲ್ಲಿ ವಾಸವಾಗಿರುವ ಪ್ರಧಾನಿ ಸನ್ನಾ ತನ್ನ ಕುಟುಂಬದ ಉಪಹಾರಕ್ಕಾಗಿ ತಿಂಗಳಿಗೆ ಸುಮಾರು 300 ಯುರೋಗಳಷ್ಟು (26,423) ವಾಪಸ್ ಪಡೆಯುತ್ತಿದ್ದಾರೆ ಎಂದು ವರದಿ ಪ್ರಕಟಿಸಿತ್ತು.
ವರದಿ ಪ್ರಕಟವಾದ ನಂತರ ಫಿನ್ ಲ್ಯಾಂಡ್ ವಿಪಕ್ಷಗಳು ಕೂಡಾ ಪ್ರಧಾನಿ ವಿರುದ್ಧ ಅಸಮಧಾನ ವ್ಯಕ್ತಪಡಿಸಿ, ಪ್ರಧಾನಿ ಸನ್ನಾ ತೆರಿಗೆದಾರರ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿವೆ ಎಂದು ವರದಿ ತಿಳಿಸಿದೆ.
ಆರೋಪದ ಬಗ್ಗೆ ಟ್ವೀಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮರಿನ್, ನಾನು ವೈಯಕ್ತಿಕವಾಗಿ ಏನನ್ನೂ ಖರೀದಿಸಿಲ್ಲ. ಕಚೇರಿ ಹಾಗೂ ಪ್ರಧಾನಮಂತ್ರಿ ಕಚೇರಿಯ ನೌಕರರು ವಸ್ತುಗಳನ್ನು ಖರೀದಿಸಿದ್ದಾರೆ. ಈ ವಿವಾದ ಇತ್ಯರ್ಥವಾಗುವವರೆಗೆ ಎಲ್ಲವನ್ನು ಸ್ಥಗಿತಗೊಳಿಸುವಂತೆ ಕೇಳಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಪ್ರಧಾನಿಯಾಗಿ ನಾನು ಯಾವ ಪ್ರಯೋಜವನ್ನು ಕೇಳಿಲ್ಲ, ಅದನ್ನು ನಿರ್ಧರಿಸುವಲ್ಲಿಯೂ ಭಾಗಿಯೂ ಆಗಿಲ್ಲ ಎಂದು ಪ್ರಧಾನಿ ಸನ್ನಾ ಮರಿನ್ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮದ ಜತೆ ಸಮಾಲೋಚನೆ ನಡೆಸಿದ ಕಾನೂನು ತಜ್ಞರು ಬಳಿಕ ತೆರಿಗೆದಾರರ ಹಣವನ್ನು ಪ್ರಧಾನ ಮಂತ್ರಿಯ ಬ್ರೇಕ್ ಫಾಸ್ಟ್ ಗೆ ಪಾವತಿಸಲು ಬಳಸುವುದು ಫಿನ್ ಲ್ಯಾಂಡ್ ಕಾನೂನನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ತಿಳಿಸಿದೆ.