Advertisement

ಫಿನ್ಲಂಡ್‌ : ತಾಯಿ ಮತ್ತು ತಂದೆಗೆ ಏಳು ತಿಂಗಳ ವೇತನ ಸಹಿತ ಹೆರಿಗೆ ರಜೆ

11:02 AM Feb 19, 2020 | Hari Prasad |

ಹೊಸದಿಲ್ಲಿ: ಫಿನ್ಲಂಡ್‌ ಸರಕಾರ ವಿಶ್ವದಲ್ಲಿಯೇ ಮೊದಲ ಬಾರಿಗೆ ತಾಯಿ ಮತ್ತು ತಂದೆಗೆ ಏಳು ತಿಂಗಳ ಕಾಲ ರಜೆ ನೀಡುವ ನಿರ್ಧಾರ ಕೈಗೊಂಡಿದೆ. ಅದೂ ಕೂಡ ವೇತನ ಸಹಿತವಾಗಿ. ತಂದೆ ಮತ್ತು ತಾಯಿಗೆ ಒಟ್ಟು ಸೇರಿಸಿ ಹದಿನಾಲ್ಕು ತಿಂಗಳ ಕಾಲ ರಜೆ ಸಿಗಲಿದೆ. ಮುಂದಿನ ವರ್ಷದ ಸೆಪ್ಟೆಂಬರ್‌ನಿಂದ ಹೊಸ ನಿರ್ಧಾರ ಜಾರಿಯಾಗಲಿದೆ.

Advertisement

ಅಲ್ಲಿನ ಸರಕಾರದ ನಿರ್ಧಾರದಿಂದಲಾಗಿ ಲಿಂಗ ತಾರತಮ್ಯತೆ ಎಸಗುತ್ತಿದೆ ಎಂಬ ಟೀಕೆಯಿಂದ ದೂರಸರಿದಂತಾಗಿದೆ. ಹೊಸ ವ್ಯವಸ್ಥೆಯಲ್ಲಿ ಪತಿ, ಪತ್ನಿಗೆ ತನ್ನ ರಜೆಯನ್ನು ವರ್ಗಾಯಿಸುವ ಅಧಿಕಾರವನ್ನೂ ನೀಡಲಾಗಿದೆ.

ಈ ಮೂಲಕ ಮಕ್ಕಳ ಪಾಲನೆಯಲ್ಲಿ ಹೆತ್ತವರಿಬ್ಬರ ಪಾತ್ರ ಸಾರುವ ನಿಟ್ಟಿನಲ್ಲಿ ಫಿನ್ಲಂಡ್‌ ಸರಕಾರ ಮಹತ್ವದ ಕ್ರಮ ಕೈಗೊಂಡಂತಾಗಿದೆ. ಸದ್ಯ ಫಿನ್ಲಂಡ್‌ನ‌ಲ್ಲಿ ನಾಲ್ಕು ತಿಂಗಳ ಕಾಲ ಹೆರಿಗೆ ರಜೆ ನೀಡಲಾಗುತ್ತದೆ.

ತಂದೆಗೆ 2-3 ತಿಂಗಳ ಕಾಲ ರಜೆ ಸಿಗುತ್ತಿದೆ. ಇದಲ್ಲದೆ ಹೆಚ್ಚುವರಿಯಾಗಿ ಆರು ತಿಂಗಳ ಕಾಲ ರಜೆ ಸಿಗುತ್ತದೆ. ಅದನ್ನು ಮಗುವಿನ ತಂದೆ ಮತ್ತು ತಾಯಿ ಅಗತ್ಯಕ್ಕೆ ತಕ್ಕಂತೆ ಬಳಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next