ರಾಯಚೂರು: ಯರಮರಸ್ ಬಳಿಯ ಸರ್ಕಾರಿಇಂಜಿನಿಯರ್ ಕಾಲೇಜಿನಲ್ಲಿ ಐಐಐಟಿ ತರಗತಿಆರಂಭಿಸುವ ನಿಟ್ಟಿನಲ್ಲಿ ಬಾಕಿ ಕಾಮಗಾರಿತ್ವರಿತಗತಿಯಲ್ಲಿ ಮುಗಿಸುವಂತೆ ಸಂಬಂಧ ಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ನಿರ್ದೇಶನ ನೀಡಿದರು.
ಯರಮರಸ್ ಬಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಿರ್ಮಿಸುತ್ತಿರುವ ಐಐಐಟಿಯ ತಾತ್ಕಾಲಿಕ ಕಟ್ಟಡದಲ್ಲಿ ತರಗತಿಗಳಆರಂಭಕ್ಕೆ ಕೈಗೊಳ್ಳಬೇಕಾದ ಪೂರ್ವಭಾವಿ ಸಿದ್ಧತೆಗಳ ಕುರಿತು ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಐಐಐಟಿ ತರಗತಿ ಆರಂಭಕ್ಕೆ ಅಗತ್ಯವಿರುವ ಮೂಲ ಸೌಲಭ್ಯ ಒದಗಿಸುವಂತೆ ಈ ಹಿಂದೆಭೇಟಿ ನೀಡಿದ ತಜ್ಞರ ತಂಡ ಸೂಚಿಸಿತ್ತು. ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿದಾಗ ಕೂಲಂಕಷವಾಗಿ ಪರಿಶೀಲಿಸಿ ಏನೆಲ್ಲ ಸೌಲಭ್ಯ ಅಗತ್ಯ ಎಂಬುದನ್ನು ತಿಳಿಸಿತ್ತು. ತರಗತಿಗಳು ಹಾಗೂ
ವಿದ್ಯಾರ್ಥಿ ನಿಲಯಗಳ ಆರಂಭಕ್ಕೆ ಅಗತ್ಯವಿರುವ ಸೌಕರ್ಯಗಳ ಪಟ್ಟಿ ಒದಗಿಸಿ ಅದರಂತೆ ಸೌಲಭ್ಯ ಕಲ್ಪಿಸುವಂತೆ ತಿಳಿಸಿತ್ತು. ಆ ಹಿನ್ನೆಲೆಯಲ್ಲಿ ಕಟ್ಟಡಕ್ಕೆ ವೈ ಫೈ, ಯುಪಿಎಸ್, ಇನ್‌ವರ್ಟರ್, ಟಿ.ವಿ, ಗೀಸರ್, ಬೀದಿ ದೀಪಗಳು, ರಸ್ತೆ, ಚರಂಡಿ, 15 ಕೆ.ಬಿ. ಜನರೇಟರ್, ಬಾಸ್ಕೆಟ್‌ಬಾಲ್, ಫುಟ್‌ಬಾಲ್, ವಾಲಿಬಾಲ್ ಮೈದಾನ ಸಿದ್ಧಪಡಿಸಬೇಕು. ವಿದ್ಯಾರ್ಥಿನಿಲಯದ ಕಿಟಕಿಗಳಿಗೆ ಮೆಸ್ ಅಳವಡಿಕೆ, ಅಡುಗೆ ಕೋಣೆಯಲ್ಲಿ ಶುದ್ಧ ಕುಡಿವ ನೀರು ಪೂರೈಕೆ, ನಾಮಫಲಕಗಳು ಸೇರಿ ಕೂಡಲೇ ಬಾಕಿ ಉಳಿದಿರುವ ಕಾಮಗಾರಿ ಮುಗಿಸುವಂತೆ ಸೂಚಿಸಿದರು.
ಲೋಕೋಪಯೋಗಿ ಇಲಾಖೆ, ಕ್ಯಾಷುಟೆಕ್, ಕೆಆರ್‌ಐಡಿಎಲ್ ಸಂಸ್ಥೆಗಳಿಗೆ ಕಾಮಗಾರಿ ಹೊಣೆ ನೀಡಿದ್ದು, ನಿಮಗೆ ಸಂಬಂ ಧಿಸಿದ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸುವಂತೆ ಸೂಚಿಸಿದರು. ರಸ್ತೆ ಗುಂಡಿ ಮುಚ್ಚುವುದು, ವಿದ್ಯುತ್ ಪೂರೈಕೆಗೆ ಪರಿವರ್ತಕಗಳ ಅಳವಡಿಕೆ, ಮಳೆಗಾಲವಾದ ಕಾರಣ ಕೂಡಲೇ ಸಸಿ ನೆಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಬರುವ 15-20 ದಿನಗಳಲ್ಲಿ ಹೈದರಾಬಾದ್‌ನ ತಂಡವು ಆಗಮಿಸಿ ಇಲ್ಲಿ ಒದಗಿಸಿರುವ ಸೌಲಭ್ಯ ಕುರಿತು ಪರಿಶೀಲಿಸಲಿದೆ ಎಂದರು.
ಈ ವೇಳೆ ಜಿಪಂ ಸಿಇಒ ಲಕ್ಷ್ಮೀಕಾಂತ ರೆಡ್ಡಿ, ಪಿಡಬ್ಲ್ಯುಡಿ ಇಇ ಚನ್ನಬಸಪ್ಪ ಮೆಕಾಲೆ, ಕ್ಯಾಷುಟೆಕ್ ನ ಶರಣಬಸಪ್ಪ ಪಟ್ಟೇದ್, ಕೆಆರ್‌ಡಿಎಲ್‌ನ ಕಾರ್ಯನಿರ್ವಾಹಕ ಇಂಜಿನಿಯರ್ ಅನಿಲ್‌ಕುಮಾರ್, ಕಾಲೇಜು ಪ್ರಾಚಾರ್ಯ ವೀರೇಶ್ ಇತರರಿದ್ದರು.
ಈ ತಾತ್ಕಾಲಿಕ ಕಟ್ಟಡದಲ್ಲಿ ತರಗತಿ ಪ್ರಾರಂಭಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಈಗಾಗಲೇ ಸೂಚಿಸಿದ್ದಾರೆ. ಹೈದರಾಬಾದ್‌ನಲ್ಲಿ ನಡೆಯುತ್ತಿರುವ ತರಗತಿಗಳು ಇನ್ನು ಮುಂದೆ ಇಲ್ಲಿಯೇಪ್ರಾರಂಭವಾಗಲಿದ್ದು, ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು.
– ಆರ್. ವೆಂಕಟೇಶಕುಮಾರ್, ಜಿಲ್ಲಾಧಿಕಾರಿ