Advertisement

ಅಪರಾಧ ನಿರೂಪಿಸುವಲ್ಲಿ  ಬೆರಳು ಮುದ್ರಣ ಮುಖ್ಯ

05:22 PM Oct 20, 2018 | |

ಹುಬ್ಬಳ್ಳಿ: ಅಪರಾಧಿಯ ಅಪರಾಧ ನಿರೂಪಿಸುವಲ್ಲಿ ಬೆರಳು ಮುದ್ರಣ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ ಎಂದು ಮಧ್ಯಪ್ರದೇಶದ ಭೂಪಾಲ್‌ನ ಬೆರಳು ಮುದ್ರಣ, ನ್ಯಾಯ ವಿಜ್ಞಾನ ಪ್ರಯೋಗಾಲಯದ ನಿರೀಕ್ಷಕಿ ನಿಧಿ ಶ್ರೀವಾತ್ಸವ ಹೇಳಿದರು.

Advertisement

ಇಲ್ಲಿನ ಹಳೇಹುಬ್ಬಳ್ಳಿ ಹೆಗ್ಗೇರಿಯ ಜೆಎಸ್‌ಎಸ್‌ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ನ್ಯಾಯ ವಿಜ್ಞಾನ ಹಾಗೂ ಬೆರಳು ಮುದ್ರಣ ಪರೀಕ್ಷೆಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಅಪರಾಧ ಪ್ರಕರಣಗಳಲ್ಲಿ ಬೆರಳು ಮುದ್ರಣವನ್ನು ಹಲವು ಪ್ರಕಾರಗಳಲ್ಲಿ ಪರಿಶೀಲಿಸಬೇಕು ಹಾಗೂ ಹಲವು ವಿಧಾನಗಳ ಮೂಲಕ ಪರೀಕ್ಷಿಸಬೇಕು. ಅಲ್ಲದೇ ಅವುಗಳನ್ನು ಹೋಲಿಸುವ ವಿಷಯದ ಕುರಿತು ವಿವರಿಸಿದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಪ್ರೊ| ಶರತ ಫಡ್ನಿಸ್‌ ಮಾತನಾಡಿ, ಬೆರಳು ಮುದ್ರಣದ ಮಹತ್ವ ಹಾಗೂ ಅಪರಾಧಿಯ ವಿಚಾರಣೆಯಲ್ಲಿ ನ್ಯಾಯವಾದಿಗಳಿಗೆ ಬೆರಳು ಮುದ್ರಣದ ಮಾಹಿತಿಯ ಜ್ಞಾನದ ಅವಶ್ಯಕತೆ ಬಗ್ಗೆ ವಿವರಿಸಿದರು. ಜೊತೆಗೆ ಪಾಟಿ ಸವಾಲಿನಲ್ಲಿ ತಜ್ಞರ ಅಭಿಪ್ರಾಯ ನಿರೂಪಿಸಲು. ಇಲ್ಲವೆ ಅಲ್ಲಗಳೆಯಲು ತುಂಬಾ ಸಹಾಯವಾಗುತ್ತದೆ ಎಂದರು. ಜೆಎಸ್‌ಎಸ್‌ ಸಕ್ರಿ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ರೂಪಾ ಇಂಗಳಹಳ್ಳಿ ಮಾತನಾಡಿ, ವಕೀಲ ವೃತ್ತಿಯ ಪದವಿಯ ಅಧ್ಯಯನದಲ್ಲಿ ವಿಶ್ವವಿದ್ಯಾಲಯದ ಪಠ್ಯಗಳೊಂದಿಗೆ ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳ ವೃತ್ತಿ ಕೌಶಲತೆ ವೃದ್ಧಿಸಲು ತುಂಬಾ ಸಹಾಯವಾಗುತ್ತವೆ ಎಂದರು.

ಪ್ರೊ| ಬಾಬುಲಾಲ ದರ್ಗದ, ಪ್ರೊ| ದೀಪಾ ಪಾಟೀಲ, ಪ್ರೊ| ಸುರೇಶ ಲಿಂಬಿಕಾಯಿ, ಪ್ರೊ| ಪೂರ್ಣಿಮಾ ಮುರಗೋಡ, ಪ್ರೊ| ವಿಶ್ವನಾಥ ಬಿಚಗತ್ತಿ ಮೊದಲಾದವರಿದ್ದರು. ಪ್ರೊ| ಶ್ರೀಶೈಲ ಮುಧೋಳ ನಿರೂಪಿಸಿದರು. 60 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next