ರಾಗಿ- 1 ಕಪ್
ಸಕ್ಕರೆ- 1 ಕಪ್
ಹಾಲು- 1 ಕಪ್
ನೀರು- 1 ಕಪ್
ಏಲಕ್ಕಿ- ಸ್ವಲ್ಪ
ತುಪ್ಪ- ಸ್ವಲ್ಪ
Advertisement
ಮಾಡುವ ವಿಧಾನರಾಗಿಯನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಅದಕ್ಕೆ ಒಂದು ಕಪ್ ನೀರು ಹಾಕಿ ನಯವಾಗಿ ರುಬ್ಬಬೇಕು. ಅನಂತರ ಒಂದು ಬಟ್ಟೆಯಿಂದ ಅದನ್ನು ಚೆನ್ನಾಗಿ ಸೋಸಿಕೊಳ್ಳಬೇಕು. ಸೋಸಿದ ರಾಗಿ ಹಿಟ್ಟಿನಲ್ಲಿ ಸಕ್ಕರೆ, ಹಾಲು, ತುಪ್ಪ ಹಾಕಿ ಸಣ್ಣ ಉರಿಯ ಮೇಲೆ ಕುದಿಸಿ. ಈ ಮಿಶ್ರಣ ಗಟ್ಟಿಯಾದೊಡನೆ ತುಪ್ಪ ಸವರಿದ ತಟ್ಟೆಗೆ ಹಾಕಿಕೊಂಡು ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ. ಬೇಸಿಗೆಯಲ್ಲಿ ಇದು ತಂಪು. ಆರೋಗ್ಯಕ್ಕೂ ಒಳ್ಳೆಯದು.