Advertisement
ಇಲಾಖೆ ಕ್ರಮ: ಚಾಮುಂಡಿಬೆಟ್ಟಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಆಗಮಿಸುತ್ತಿರುವ ಜತೆಗೆ ಅನುಮತಿ ಇಲ್ಲದೇ ಚಾಮುಂಡಿ ಬೆಟ್ಟ ಮೀಸಲು ಅರಣ್ಯದೊಳಗೆ ಅತಿಕ್ರಮ ಪ್ರವೇಶಿಸುವುದು, ಮದ್ಯಪಾನ ಒಳಗೊಂಡಂತೆ ಹಾನಿಕಾರಕ ವಸ್ತುಗಳನ್ನು ಕಾಡಿನೊಳಗೆ ಬಳಸುವುದು ಮತ್ತು ತ್ಯಾಜ್ಯ ವಿಲೇ ಮಾಡಿ ಅರಣ್ಯಕ್ಕೆ ಹಾನಿ ಮಾಡುತ್ತಿರುವುದನ್ನು ತಡೆಯಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.
Related Articles
Advertisement
ಪರಿಸರ ಸೂಕ್ಷ್ಮ ಪ್ರದೇಶದ ಚಾಮುಂಡಿ ಬೆಟ್ಟದ ನೈಸರ್ಗಿಕ ಸಂಪತ್ತನ್ನು ಇಂತಹ ವಿನಾಶಕಾರಿ ಚಟುವಟಿಕೆ ವಸ್ತುಗಳಿಂದ ರಕ್ಷಿಸಲು, ಚಾಮುಂಡಿಬೆಟ್ಟಕ್ಕೆ ಬರುವ ಪ್ರವಾಸಿಗರು, ಭಕ್ತರಿಗೆ ಅರಿವು ಮೂಡಿಸಲು ಹಾಗೂ ಕಾನೂನು ಬಾಹಿರ ಚಟುವಟಿಕೆಗೆ ಕಡಿವಾಣ ಹಾಕಿ, ದಂಡ ವಿಧಿಸಲು ಆದೇಶ ಹೊರಡಿಸಲಾಗಿದೆ ಎಂದು ವಿವರಿಸಿದೆ.
ನಿಯಮ ಉಲ್ಲಂಘಿಸಿದರೆ ವಿಧಿಸುವ ದಂಡ ಇಂತಿದೆ:
- ಚಾಮುಂಡಿಬೆಟ್ಟಕ್ಕೆ ಅತಿಕ್ರಮ ಪ್ರವೇಶ 500 ರೂ.
- ಅನುಮತಿ ಇಲ್ಲದ ಪ್ರದೇಶಗಳಲ್ಲಿ ವಾಹನ ನಿಲುಗಡೆ 1000
- ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಿಸಾಡುವುದು 500 ರೂ.
- ಅಂಗಡಿ ಮಾಲಿಕರು ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದರೆ ಮೊದಲ ಬಾರಿಗೆ 2500 ರೂ., 2ನೇ ಬಾರಿಗೆ 5 ಸಾವಿರ ರೂ., 3ನೇ ಬಾರಿಗೆ 10 ಸಾವಿರ ರೂ. ದಂಡ.
- ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಚಾಮುಂಡಿಬೆಟ್ಟದ ನಿವಾಸಿಗಳನ್ನು ಹೊರತುಪಡಿಸಿ ಹೊರಗಡೆಯಿಂದ ಅನಧಿಕೃತವಾಗಿ ಬೆಟ್ಟಕ್ಕೆ ತೆರಳಿದರೆ 2500 ರೂ. ದಂಡ
- ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ರವರೆಗೆ ಬೆಟ್ಟಕ್ಕೆ ಮದ್ಯಪಾನ ಸೇರಿದಂತೆ ಯಾವುದೇ ಹಾನಿಕಾರಕ ವಸ್ತು ಕೊಂಡೊಯ್ದರೆ 5 ಸಾವಿರ ರೂ.ದಂಡ
- ವನ್ಯಜೀವಿಗಳಿಗೆ ಉಪದ್ರವ ನೀಡುವುದು, ತಿಂಡಿ-ತಿನಿಸು ನೀಡಿದರೆ 1 ಸಾವಿರ
- ಇತರೆ ಯಾವುದೇ ಅರಣ್ಯ ಅಥವಾ ವನ್ಯಜೀವಿಗೆ ಹಾನಿ ಮಾಡಿದರೆ, ಹಾನಿ ಮಾಡುವ ಚಟುವಟಿಕೆ ನಡೆದರೆ 1 ಸಾವಿರ ರೂ. ದಂಡ ನಿಗದಿ