Advertisement

ಮಾಸ್ಕ್ ಹಾಕದವರಿಗೆ ಬಿತ್ತು ದಂಡ

08:57 AM Jun 21, 2020 | Suhan S |

ಚಳ್ಳಕೆರೆ: ನಗರಸಭೆ ಅಧಿಕಾರಿಗಳು ಮಾಸ್ಕ್ ಧರಿಸದೆ ಓಡಾಡುವ ದ್ವಿಚಕ್ರವಾಹನ ಸವಾರರನ್ನು ತಡೆಗಟ್ಟಿ ದಂಡ ವಿಧಿಸಿದರು.

Advertisement

ಇಲ್ಲಿನ ನಗರಸಭಾ ಕಾರ್ಯಾಲಯದ ಮುಂಭಾಗದಲ್ಲಿ ಪೌರಾಯುಕ್ತ ಪಿ.ಪಾಲಯ್ಯ ಮಾರ್ಗದರ್ಶನದಲ್ಲಿ ನಗರಸಭೆಯ ನೈರ್ಮಲ್ಯ ಇಂಜಿನಿಯರ್‌ ನರೇಂದ್ರಬಾಬು, ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ಕಿರಿಯ ಆರೋಗ್ಯ ನಿರೀಕ್ಷಕರಾದ ನಿರ್ಮಲಾ, ಗಣೇಶ್‌, ದಾದಾಪೀರ್‌, ಮಂಜುನಾಥ ಮುಂತಾದವರು ದ್ವಿಚಕ್ರವಾಹನಗಳ ತಪಾಸಣೆ ನಡೆಸಿ 20ಕ್ಕೂ ಹೆಚ್ಚು ಜನರಿಗೆ ದಂಡ ವಿಧಿಸಿ 50ಕ್ಕೂ ಹೆಚ್ಚು ದ್ವಿಚಕ್ರವಾಹನ ಚಾಲಕರಿಗೆ ಎಚ್ಚರಿಕೆ ನೀಡಿದರು. ಕೆಲವರು ಮಾಸ್ಕ್ಗಳನ್ನು ಜೇಬಲ್ಲಿಟ್ಟುಕೊಂಡು ಓಡಾಡುತ್ತಿದ್ದರು. ಅವರಿಗೂ ಎಚ್ಚರಿಕೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next