Advertisement

ಕುಷ್ಟಗಿ: ಮಾಸ್ಕ್ ಹಾಕದವರಿಗೆ ಪೊಲೀಸರಿಂದ ದಂಡದ ಬಿಸಿ

03:39 PM Jan 12, 2022 | Team Udayavani |

ಕುಷ್ಟಗಿ: ಒಮಿಕ್ರಾನ್ ವೈರಸ್ ಪ್ರಕರಣ ಹೆಚ್ಚಳವಾದ ಹಿನ್ನೆಲೆಯಲ್ಲಿ ತಹಶೀಲ್ದಾರ ಎಂ.ಸಿದ್ದೇಶ, ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಅವರು ಇಲ್ಲಿನ ಮಾರುತಿ ವೃತ್ತದಲ್ಲಿ ಮಾಸ್ಕ್ ಹಾಕದವರಿಗೆ ದಂಡದ ಬಿಸಿ ಮುಟ್ಟಿಸಿದರು.

Advertisement

ಒಮಿಕ್ರಾನ್ ವೈರಸ್ ಪ್ರಕರಣ ಕ್ರಮೇಣ  ಹೆಚ್ಚಳವಾಗುತ್ತಿದ್ದರೂ ಜನ ಅದರ ಭಯವಿಲ್ಲದೇ ಮಾಸ್ಕ್ ಧರಿಸದೇ ಸಂಚರಿಸುವ  ಬೈಕ ಸವಾರನ್ನು ತಡೆದು ದಂಡ ಹಾಕಲು ಶುರು ಮಾಡಿದರು.  ಮಾಸ್ಕ ಹಾಕದ ಬೈಕ್ ಸವಾರರ ಬೈಕಿನ ಕೀ ಕಸಿದುಕೊಂಡು ಮೊದಲ ಹಂತವಾಗಿ 100 ರೂ. ಹಾಕಲಾರಂಭಿಸಿದರು. ವಾದ ಮಾಡಿದ ಬೈಕ್ ಸವಾರರಿಗೆ 500 ರೂ. ದಂಡ ಹಾಕಿದರು.

ಏಕಾಏಕಿ ಬೈಕ್ ಸವಾರರಿಗೆ ದಂಡ ಹಾಕಿರುವುದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದರೂ ಲೆಕ್ಕಿಸದೇ ದಂಡ ಹಾಕುತ್ತಿರುವುದು ಕಂಡು ಬಂತು. ಬೈಕಿನ ಕೀ ಪೊಲೀಸರು ಕಸಿದುಕೊಂಡಾಗ ಬೈಕ್ ಸವಾರರು ವಾದಕ್ಕೆ ಇಳಿದಾಗ, ವಾದ ಮಾಡಿದರೆ 500 ರೂ. ದಂಡ ಹಾಕುವುದಾಗಿ ಎಚ್ಚರಿಸಿದರು.

ಈ ಕುರಿತು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಪ್ರತಿಕ್ರಿಯಿಸಿ ದಿನೇ ದಿನೇ ಒಮಿಕ್ರಾನ್ ಪ್ರಕರಣ ಹೆಚ್ಚಳವಾಗಿದ್ದು, ಜನರಿಂದ ಜಾಣ ಮರೆವು ಇದೆ. ಕಡ್ಡಾಯ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಿದರೂ ಜನ, ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದು ಇವರಿಗೆ ಜಾಗೃತಿಗೆ ದಂಡ ಹಾಕಲಾಗುತ್ತಿದೆ. ಇನ್ಮುಂದೆ ಟಫ್ ರೂಲ್ಸ್ ಜಾರಿಯಲ್ಲಿರುತ್ತದೆ. ಕೇವಲ ಅರ್ಧ ಗಂಟೆಯಲ್ಲಿ 32 ಬೈಕ್ ಸವಾರರಿಗೆ ದಂಡ ಹಾಕಿರುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next