Advertisement
ಶೈಕ್ಷಣಿಕ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿದೆ. ಹೊಸ ಹೊಸ ಕೋರ್ಸ್‌ಗಳು ಸೇರ್ಪಡೆಯಾಗುತ್ತಿವೆ. ಅದರಲ್ಲಿಯೂ ಕ್ರಿಯಾತ್ಮಕ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಹೆಚ್ಚು ಗಮನ ನೀಡುತ್ತಾರೆ. ಅಂತಹ ಕ್ರಿಯಾತ್ಮಕ ಕೋರ್ಸ್‌ಗಳ ಪೈಕಿ ಲಲಿಕ ಕಲೆ (ಫೈನ್ ಆರ್ಟ್) ಕೋರ್ಸ್ ಕೂಡ ಒಂದು.
Related Articles
ಪದವಿ ಬಳಿಕ ಮಲ್ಟಿಮೀಡಿಯಾ ಆರ್ಟಿಸ್ಟ್, ಆರ್ಟ್ ಡೈರೆಕ್ಟರ್, ಆರ್ಟ್ ಟೀಚರ್, ಡೈರೆಕ್ಟರ್, ಪೈಂಟರ್, ಕ್ರಾಫ್ಟ್ ಆರ್ಟಿಸ್ಟ್, ಕ್ರಿಯೇಟಿವ್ ಡೈರೆಕ್ಟರ್, 3ಡಿ ಆರ್ಟಿಸ್ಟ್ ಅಥವಾ ಗ್ರಾಫಿಕ್ಸ್ ಡೀಸೈನರ್ ಆಗಬಹುದು. ಜತೆಗೆ ಮ್ಯೂಸಿಯಂ, ಆರ್ಟ್ ಗ್ಯಾಲರಿ, ಥಿಯೇಟರ್, ಪ್ರೊಡಕ್ಷನ್ ಹೌಸ್, ಜಾಹೀರಾತು ಸಂಸ್ಥೆ, ಪ್ರಕಾಶನ, ಮೀಡಿಯಾ ಹೌಸ್ ಮೊದಲಾದೆಡೆ ಕೂಡ ಕೆಲಸ ಮಾಡಬಹುದಾಗಿದೆ. ಪದವಿಯ ಜತೆಗೆ ಆ್ಯನಿಮೇಶನ್‌ನಲ್ಲಿ ಡಿಪ್ಲೊಮಾ ಅಥವಾ ಸರ್ಟಿಫಿಕೇಟ್ ಕೋರ್ಸ್ ಮಾಡಬಹುದಾಗಿದೆ. ಆ್ಯನಿಮೇಶನ್‌ನಲ್ಲಿ ಬ್ಯಾಚುಲರ್ ಡಿಗ್ರಿ ಪೂರ್ಣಗೊಳಿಸಿದ ಬಳಿಕ ಟೆಕ್ಸ$cರ್ ಆರ್ಟಿಸ್ಟ್, ಕ್ಯಾರೆಕ್ಟರ್ ಮಾಡ್ಯುಲರ್, ಕ್ಯಾರೆಕ್ಟರ್ ಅನಿಮೇಟರ್, ಸ್ಟೋರಿ ಬೋರ್ಡ್ ಆರ್ಟಿಸ್ಟ್, ವಿಎಫ್‌ಎಕ್ಸ್ ಅನಿಮೇಟರ್, ವಿಡಿಯೋ ಗೇಮಿಂಗ್, ಪ್ರೊಡಕ್ಷನ್ ಹೌಸ್, ಮೊಬೈಲ್ ಆ್ಯಪ್ ಡೆವಲಪರ್ ಮೊದಲಾದ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಸಾಧ್ಯವಿದೆ.
Advertisement
ಸೆರಾಮಿಕ್ ಆರ್ಟಿಸ್ಟ್ಗಳುಮಣ್ಣಿನಿಂದ ಕಲಾಕೃತಿಗಳನ್ನು ತಯಾರಿ ಒಂದು ಕಲೆ. ಮಣ್ಣು ಸೇರಿದಂತೆ ವಿವಿಧ ವಸ್ತುಗಳಿಂದ ತಯಾರಿಸಿದ ಕರಕುಶಲ ಉತ್ಪನ್ನ ತಯಾರಿಸುವವರು ಸೆರಾಮಿಕ್ ಆರ್ಟಿಸ್ಟ್‌ಗಳು. ಮಣ್ಣನ್ನು ಪ್ರಧಾನವಾಗಿಟ್ಟುಕೊಂಡು ಗೃಹೋಪಯೋಗಿ, ಅಲಂಕಾರಿಕ ವಸ್ತುಗಳನ್ನು ನಿರ್ಮಿಸಿಕೊಡುವ ಪ್ರಬಲ ಮಾಧ್ಯಮವೊಂದು ಬೆಳೆದಿದೆ. ಗಾಜು, ಮರ, ಬಣ್ಣಗಳನ್ನು ಬಳಸಿ ಆಲಂಕಾರಿಕ ವಸ್ತುಗಳನ್ನು ವಿವಿಧ ವಿನ್ಯಾಸಗಳಲ್ಲಿ ತಯಾರಿಸುವ ಮಂದಿಯೇ ಸೆರಾಮಿಕ್ ಆರ್ಟಿಸ್ಟ್‌ಗಳು. ಎಲ್ಲೆಲ್ಲಿ ಕಲಿಯಬಹುದು?
ಈ ಕಲಾ ಪ್ರಾಕಾರವನ್ನು ಕಲಿತರೆ ಆರ್ಟ್ ಗ್ಯಾಲರಿಗಳು, ಆರ್ಟ್ ಸ್ಕೂಲ್ ಆ್ಯಂಡ್ ಕಾಲೇಜು, ಸೆರಾಮಿಕ್ ಉತ್ಪನ್ನ ಕಾರ್ಖಾನೆಗಳು ಮತ್ತು ಸ್ಟುಡಿಯೋಗಳು, ಕಾಟೇಜ್ ಕೈಗಾರಿಕೆಗಳು, ಕ್ರಾಫ್ಟ್ ಎಂಪೋರಿಯಂ, ನ್ಯಾಷನಲ್ ಮ್ಯೂಸಿಯಂಗಳಲ್ಲಿ ಅವಕಾಶಗಳಿವೆ. ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಕಾಲೇಜು ಬೆಂಗಳೂರು, ಗುಲ್ಬರ್ಗಾ ಮತ್ತು ಮೈಸೂರು, ಎಚ್‌ಇಕೆ ಸೊಸೈಟಿ ಪಿಡಿಎ ಕಾಲೇಜ್ ಆಫ್ ಎಂಜಿನಿಯರಿಂಗ್, ಗುಲ್ಬರ್ಗಾ, ಕ್ಲೆ çಸೊಲ್ಯೂಷನ್ ಆರ್ಟ್ ಸ್ಟುಡಿಯೋ ಬೆಂಗಳೂರು ಸೇರಿದಂತೆ ಇನ್ನಿತರ ಸಂಸ್ಥೆಗಳಲ್ಲಿ ಕಲಿಯಬಹುದಾಗಿದೆ. ಬೇಡಿಕೆ ಹೆಚ್ಚುತ್ತಿದೆ
ಫೈನ್ ಆರ್ಟ್ಸ್ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಅನೇಕ ಕೋರ್ಸ್ ಗಳು ಲಭ್ಯವಿವೆ. ನಾಲ್ಕು ವರ್ಷಗಳ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ (ಬಿಎಫ್‌ಎ) ಅಥವಾ ಬ್ಯಾಚುಲರ್ ಆಫ್ ವಿಶುವಲ್ ಆರ್ಟ್ (ಬಿವಿಎ) ಆಯ್ಕೆ ಮಾಡಿಕೊಂಡು ಪೈಂಟಿಂಗ್, ಶಿಲಾಶಿಲ್ಪ, ಮೆಟಲ್ ವರ್ಕ್, ಟೆಕ್ಸ್‌ಟೈಲ್ ಡಿಸೈನ್, ಇಂಟೀರಿಯರ್ ಡೆಕೊರೇಶನ್ ಮುಂತಾದ ವಿಭಾಗಗಳಲ್ಲಿ ಸ್ಪೆಶಲೈಸೇಶನ್ ಮಾಡಲು ಸಾಧ್ಯವಿದೆ. ಲಲಿತ ಕಲಾ ಕೃತಿಗಳು ಇಂದು ಮನೆಗೂ ಬಂದು ಬಿಟ್ಟಿದೆ. ಸಾಮಾನ್ಯವಾಗಿ ಮನೆಗಳಲ್ಲಿ ಕುಟುಂಬದ ಮಂದಿಗಳ ಫೋಟೋಗಳು ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ವೃತ್ತಿಪರ ಕಲಾವಿದರ ಕಲಾಕೃತಿಗಳು, ಛಾಯಾಗ್ರಾಹಕರು ತೆಗೆದಂತಹ ಆಕರ್ಷಕ ಫೋಟೋಗಳು ಮನೆಯ ಗೋಡೆಯಲ್ಲಿ ನೇತಾಡಿಸಿರುತ್ತಾರೆ. ಫೈನ್ ಆರ್ಟ್ ಫೋಟೋಗ್ರಫಿ, ಪೈಟಿಂಗ್, ಲ್ಯಾಂಡ್‌ಸ್ಕೇಪ್ ಚಿತ್ರಗಳಿಗೆ ಬೇಡಿಕೆ ಹೆಚ್ಚುತ್ತಿದೆ. – ನವೀನ್ ಭಟ್ ಇಳಂತಿಲ