Advertisement
ಕೇಂದ್ರದ ಬಿಜೆಪಿ ಸರಕಾರ ಭರಪೂರ ಸುಳ್ಳು ಆಶ್ವಾಸನೆಗಳನ್ನೆ ನೀಡಿ ಜನ ಸಾಮಾನ್ಯರ ದಾರಿ ತಪ್ಪಿಸುತ್ತಿದೆ. ಗಂಗಾ ನದಿ ಸ್ವಚ್ಛಗೊಳಿಸುತ್ತೇವೆಂದು ಭರವಸೆ ನೀಡಿದ್ದ ಸರಕಾರ ಕೇವಲ ದಡವನ್ನಷ್ಟೇ ಸ್ವಚ್ಛಗೊಳಿಸಿದೆ ಎಂದು ಅವರು ಆರೋಪಿಸಿದರು. ಯಾವುದೇ ತರಹದ ಸರ್ವಾಧಿಕಾರಿ ಧೋರಣೆ ಎಲ್ಲಿಯೂ ಹೆಚ್ಚುಕಾಲ ಬಾಳದು ಎಂದ ಅವರು ಹಿಟ್ಲರ್ ಅಧಿಪತ್ಯದ ಪತನವನ್ನು ಉಲ್ಲೇಖೀಸಿದರು. ಕೇಂದ್ರದ ಬಿಜೆಪಿ ಆಡಳಿತ ಹಾಗೂ ಅದನ್ನು ಮುನ್ನಡೆತ್ತಿರುವ ಆರೆಸ್ಸೆಸ್ ವಿಕ್ರಮ -ಬೇತಾಳರಿದ್ದಂತೆ ಎಂದು ತಿಳಿಸಿದ ಅವರು, ಕೋಮುವಾದದ ಬೀಜವನ್ನು ರಾಷ್ಟ್ರೀಯತೆಯ ಹೆಸರಲ್ಲಿ ಜನರ ಮನಸಲ್ಲಿ ಬಿತ್ತುತ್ತಿರುವ ಬಿಜೆಪಿ, ಸಮಾಜದಲ್ಲಿ ಅಸುರಕ್ಷತೆಯ ಭಾವನೆಯನ್ನು ಸೃಷ್ಟಿಸಿ ಆಳುತ್ತಿರುವುದು ಆತಂಕಕಾರಿ ಎಂದು ತಿಳಿಸಿದರು. ದನ, ತೆಂಗಿನಕಾಯಿ ಒಂದು ಪಂಗಡದ್ದು, ಆಡು, ಖರ್ಜೂರ ಮತ್ತೂಂದು ಪಂಗಡದ್ದು ಎಂಬುದಾಗಿ ವಿಂಗಡಿಸಿ ಆಳುವ ನೀತಿ ಕೇಂದ್ರದ್ದಾಗಿದೆ ಎಂದು ಆರೋಪಿಸಿದರು.
ದೇಶದ ಸಾಮಾಜಿಕ ನೀತಿ, ಪ್ರಜಾಪ್ರಭುತ್ವದ ಜಾತ್ಯತೀತತೆ, ಧರ್ಮ ನಿರಪೇಕ್ಷತೆಯಂತಹ ಆಶಯಗಳನ್ನು ಧೂಳಿಪಟ ಮಾಡಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷರ ನಡೆಯನ್ನು ಪ್ರಶ್ನಿಸಿದರು. ಇತ್ತೀಚೆಗೆ ಪುತ್ತೂರಿನ ಕಾಲೇಜಿಗೆ ಭೇಟಿ ನೀಡಿ ಉಪನ್ಯಾಸ ನೀಡಿದ್ದ ಅಮಿತ್ ಶಾ ಆಗಮನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಮಿತ್ ಶಾ – ಮೋದಿ ಆಡಳಿತ ಬಂಡಲ್ ರಾಜ್ ಎಂದು ಹೇಳಿದ್ದ ವಿದ್ಯಾರ್ಥಿಯ ದನಿಯನ್ನು ದಮನಿಸುವ ಪ್ರಯತ್ನ ನಡೆದಿದ್ದು ಅದು ಸರಿಯಲ್ಲ ಎಂದರು.
Related Articles
Advertisement
ಜನ ಸಾಮಾನ್ಯರನ್ನು ಇಬ್ಬಗೆ ರಾಜಕೀಯ ನೀತಿಗಳಿಂದ ಒಡೆದು ಆಳಿ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದರು.ಕಾರ್ಯಕ್ರಮದ ಸಮನ್ವಯಕರಾಗಿ ಭಾಗವಹಿಸಿದ್ದ ಮಂಗಳೂರು ವಿ.ವಿ. ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ| ಪಟ್ಟಾಭಿರಾಮ ಸೊಮಯಾಜಿ ಮಾತನಾಡಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ| ಅನಂತಮೂರ್ತಿ ಅವರ ಕೊನೆಯ ಪುಸ್ತಕ ಮತ್ತು ಬಲು ದೊಡ್ಡ ಪ್ರಶ್ನೆ ಹಿಂದುತ್ವ ಬೇಕೋ ಅಥವಾ ಹಿಂದೂ ಸ್ವರಾಜ್ ಬೇಕೋ ಎನ್ನುವುದನ್ನು ಎಲ್ಲರ ತಮ್ಮೊಳಗೆ ಕೇಳಿಕೊಳ್ಳಬೇಕಿದೆ. ದೇಶದಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯ ಎಲ್ಲರಿಂದ ನಡೆಯಬೇಕಿದೆ ಎಂದರು. ಖ್ಯಾತ ದಂತ ವೈದ್ಯ ಡಾ| ಮರಳಿ ಮೋಹನ್ ಚೂಂತಾರು, ಪ್ರತಿಷ್ಠಾನದ ಟ್ರಸ್ಟಿ ದಿವಾಕರ್ ಎಸ್.ಜೆ. ಉಪಸ್ಥಿತರಿದ್ದರು. ಪ್ರತಿಷ್ಠಾನದ ಪ್ರಧಾನ ಸಂಚಾಲಕ ಹರ್ಷಾದ್ ಸ್ವಾಗತಿಸಿ, ಉಮರ್ ಬೋರ್ಕಳ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಾರ್ವಜನಿಜಿಕರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದಕ್ಕೂ ಮೊದಲು ಪ್ರಕಾಶ್ ರೈ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕವಾದ ಗಿಳಿವಿಂಡಿಗೆ ಭೇಟಿ ನೀಡಿದರು. ಗೋವಿಂದ ಪೈಗಳ ಪ್ರತಿಮೆಗೆ ಹಾರಾರ್ಪಣೆಗೈದು ನಮನ ಸಲ್ಲಿಸಿದರು. ಬಳಿಕ ಯಕ್ಷಗಾನ ವಸ್ತುಸಂಗ್ರಹಾಲಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಹರ್ಷಾದ್, ಗಿಳಿವಿಂಡಿನ ಕಾರ್ಯನಿರ್ವಹಣಾಧಿಕಾರಿ ಡಾ| ಕೆ. ಕಮಲಾಕ್ಷ, ಟ್ರಸ್ಟಿ ಕೆ.ಆರ್. ಜಯಾನಂದ, ಬ್ಲಾ.ಪಂ. ಅಧ್ಯಕ್ಷ ಎಕೆಎಂ ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು. ಪ್ರಸ್ತುತ ರಾಜಕೀಯ ಸನ್ನಿವೇಶಗಳನ್ನು ಕ್ಷುಲಕವಾಗಿ ಭಾವಿಸದೆ, ತಪ್ಪು ಗಳನ್ನು ಸಮರ್ಥವಾಗಿ ಎದುರಿಸಿ ದೇಶದ ನೀತಿ ನಿರೂಪಣೆಗೆ ಎಲ್ಲರೂ ಕಾರಣೀ ಭೂತರಾಗಬೇಕೆಂದು ವಿನಂತಿಸಿದರು. ರಾಜಕೀಯ ಹಾಗೂ ಸಾಮಾಜಿಕ ಕಾರ್ಯಕರ್ತನಾಗಿ ಪ್ರಸ್ತುತ ಚಳುವಳಿ ಹಮ್ಮಿಕೊಂಡಿರುವ ತನಗೆ ಪ್ರಾಮಾಣಿಕತೆಯೆ ದೊಡ್ಡ ಶಕ್ತಿಯಾಗಿದ್ದು ಅದನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಕಾಶ್ ರೈ ಹೇಳಿದರು.