Advertisement

ಉತ್ತಮ ಬದುಕು ಕಂಡುಕೊಳ್ಳುವುದೇ ನಿಜವಾದ ಜೀವನ

12:18 PM Dec 14, 2018 | |

ಭಾಲ್ಕಿ: ಮನುಷ್ಯ ಜೀವಿ ಬಿಟ್ಟರೆ ಉಳಿದ ಎಲ್ಲ ಜೀವಿಗಳು ಜೀವಿಸಿರುತ್ತವೆಯೇ ಹೊರತು ಬದುಕುವುದಿಲ್ಲ. ನಿಜವಾದ ಬದುಕುವ ಕಲೆ ಗೊತ್ತಿರುವುದು ಮಾನವ ಜೀವಿಗೆ ಮಾತ್ರ. ಹೀಗಾಗಿ ಮನುಷ್ಯನಾಗಿ ಹುಟ್ಟಿದ ಮೇಲೆ ಉತ್ತಮ ಬದುಕು ಕಂಡುಕೊಳ್ಳಬೇಕು ಎಂದು ಬೀದರ ಚಿದಂಬರಾಶ್ರಮದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.

Advertisement

ತಾಲೂಕಿನ ಬ್ಯಾಲಹಳ್ಳಿ(ಕೆ) ಗ್ರಾಮದ ಶ್ರೀ ಶಿವಾನಂದ ಕೈಲಾಸ ಆಶ್ರಮದಲ್ಲಿ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನೆ 7ನೇ ವಾರ್ಷಿಕೋತ್ಸವ ಹಾಗೂ ಸದ್ಗುರು ಶ್ರೀ ಶಿವಾನಂದ ಮಹಾಸ್ವಾಮಿಗಳ 26ನೇ ಪುಣ್ಯಾರಾಧನೆ ಮತ್ತು ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳ 22ನೇ ಪುಣ್ಯಾರಾಧನೆ
ನಿಮಿತ್ತ ಆಯೋಜಿಸಲಾಗಿದ್ದ ತುಲಾಭಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
 
ಬದುಕುವ ಕಲೆ ಗೊತ್ತಿರುವ ಮಾನವ ಜೀವಿಗೆ ಮಾತ್ರ. ಕಾರಣ ಮಾನವ ಜೀವಿ ಎಲ್ಲ ಪ್ರಾಣಿಗಳಂತೆ ಜೀವಿಸುವುದನ್ನು ಬಿಟ್ಟು ಬದುಕು ಕಂಡುಕೊಳ್ಳಬೇಕು. ಪ್ರಾಣಿಗಳು ಜೀವಿಸುತ್ತವೆ. ಆದರೆ ಅವು ಬದುಕುವುದಿಲ್ಲ. ಜೀವಿಸುವುದು ಎಂದರೆ ನಾಳೆ ಚಿಂತೆ ಇಲ್ಲದೇ ಇವತ್ತಿನಷ್ಟಕ್ಕೆ ಸಾಕು ಎಂದು ಕಾಲ ಕಳೆಯುವುದು ಜೀವಿಸುವುದಾಗಿದೆ. ಪ್ರಾಣಿ, ಪಕ್ಷಿಗಳು ನಾಳೆಯ ಚಿಂತೆ ಮಾಡುವುದಿಲ್ಲ. ಇವತ್ತಿಗೆ ಸಿಕ್ಕರೆ ಸಾಕು ಎನ್ನುತ್ತವೆ. ಆದರೆ ಮನುಷ್ಯ ಮಾತ್ರ ಭವಿಷ್ಯದ ಬಗ್ಗೆ ಚಿಂತಿಸುತ್ತಾನೆ. ಭವಿಷ್ಯದ ಬಗ್ಗೆ ಚಿಂತಿಸುವ ಕಲೆಯೇ ಬದುಕಾಗಿದೆ. 

ನಾವೆಲ್ಲರೂ ಸುಖವಾಗಿ ಬದುಕಬೇಕಾದರೆ ಪುಣ್ಯ ಮಾಡಬೇಕು. ಅಂದಾಗ ಮಾತ್ರ ನಮ್ಮ ಮುಂದಿನ ಜೀವನ ಸುಖಮಯವಾಗಿರುತ್ತದೆ ಎಂದು ಹೇಳಿದರು. ಬೀದರ ಗುರುದೇವಾಶ್ರಮದ ಮಾತೆ ಸಿದ್ದೇಶ್ವರಿ ತಾಯಿ, ಪೂಜ್ಯಶ್ರೀ ಗಣೇಶಾನಂದ ಮಹಾರಾಜರು ನೇತೃತ್ವ ವಹಿಸಿ ಮಾತನಾಡಿದರು. ಬೆಳ್ಳೂರು ಸಚ್ಚಿದಾನಂದಾಶ್ರಮದ ಮಾತೆ
ಅಮೃತಾನಂದಮಯಿ ಸಮ್ಮುಖ, ಬ್ಯಾಲಹಳ್ಳಿ ಶಿವಾನಂದ ಕೈಲಾಸ ಆಶ್ರಮದ ಪೂಜ್ಯಶ್ರೀ ಗುರುಲಿಂಗ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು.

ಚಳಕಾಪುರ ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ಧಾರೂಢ ಮಠದ ಶ್ರೀ ಶಂಕರಾನಂದ ಭಾರತಿ ಸ್ವಾಮಿಗಳು, ಮಳಚಾಪುರ ಶಂಭುಲಿಂಗಾಶ್ರಮದ ಶ್ರೀ ಸದ್ರೂಪಾನಂದ ಸ್ವಾಮಿಗಳು, ಪ್ರಭುಲಿಂಗ ಸಾಧಕರು, ಶ್ರೀ ನಾಗಲಿಂಗ ಸ್ವಾಮಿಗಳು ಪರೋಪಕಾರಂ ಮಿದಂ ಶರೀರಂ ಎನ್ನುವ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. 

ವೈಜಿನಾಥಪ್ಪ ದಾಬಶೆಟ್ಟಿ, ಬಾಬುರಾವ ಸಂಗೊಳಗಿ, ಈರಯ್ಯಸ್ವಾಮಿ ಮಠಪತಿ, ಸುಭಾಷ ಅಣ್ಣಾರಾವ್‌ ಬಾಯಪ್ಪನೋರ, ನಾಗಯ್ಯಸ್ವಾಮಿ ಸಿದ್ದಾರಪುರ, ಸಿದ್ದಮ್ಮ ಸದಾನಂದ, ಸಂಗೀತಾ ಈರಯ್ಯ, ಕಲ್ಲಪ್ಪ ಖಾಜೆಪುರೆ, ಪ್ರಭು ಬಾವಗಿ, ಮಹಾಂತಯ್ಯ ಸ್ವಾಮಿ, ವೈಜಿನಾಥಪ್ಪ ಕನಕಟ್ಟೆ, ಅಣ್ಣೆಪ್ಪ ಹೊಸಮನಿ, ಶಾಮರಾವ ಮಂದಕನಳ್ಳಿ, ಬಸವರಾಜ ಪಾಟೀಲ, ನಾಗನಾಥ ಹೊಚಕನಳ್ಳಿ, ಶಿವಾನಂದ ಪಾಟೀಲ, ಪಾರ್ವತಿ ಪರಮೇಶ್ವರ ಪಾಟೀಲ, ವಿಜಯಕುಮಾರ ಗೌಡಗಾವೆ, ಕಾವೇರಿ ಕಣಜಿ ಇದ್ದರು. ಇದೇ ವೇಳೆ ಸಿದ್ದಾರೂಢ ಮಲ್ಲಿಕಾರ್ಜುನ ಕನಕಟ್ಟೆ, ನಾಗರಾಜ ಸದಾನಂದ ಬ್ಯಾಲಹಳ್ಳಿ, ಶ್ರೀದೇವಿ ಧನಶೆಟ್ಟಿ, ಸಂಧ್ಯಾರಾಣಿ ಶರಣಬಸವ, ಅಪ್ಪಾರಾವ ಪಾಟೀಲ ಚಿದ್ರಿ ಅವರಿಂದ ಶಿವಕುಮಾರ ಶ್ರೀಗಳ ತುಲಾಭಾರ ಸೇವೆ ನಡೆಯಿತು. ಜಯರಾಜ ವೈಜಿನಾಥಪ್ಪ ಸ್ವಾಗತಿಸಿದರು. ರಮೇಶ ಶ್ರೀಮಂಡಲ ನಿರೂಪಿಸಿದರು. ನರೇಂದ್ರ ಪಾಟೀಲ ಚಳಕಾಪುರ ವಂದಿಸಿದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next