Advertisement

ಮೈಸೂರು; ರಸ್ತೆ ಸಮೀಪವೇ 10ಕ್ಕೂ ಅಧಿಕ ತಲೆಬುರುಡೆ ಪತ್ತೆ!

11:55 AM Jan 19, 2018 | Sharanya Alva |

ಮೈಸೂರು: ರಸ್ತೆ ಸಮೀಪವೇ 10ಕ್ಕೂ ಹೆಚ್ಚು ತಲೆ ಬುರುಡೆಗಳು ಪತ್ತೆಯಾಗಿದ್ದು, ಜನರು ಇದನ್ನು ಕುತೂಹಲ, ಗಾಬರಿಯಿಂದ ವೀಕ್ಷಿಸುತ್ತಿರುವ ಘಟನೆ ಮೈಸೂರಿನ ವಿಜಯನಗರ 2ನೇ ಹಂತದ ರಸ್ತೆಯಲ್ಲಿ ನಡೆದಿದೆ.

Advertisement

ಶುಕ್ರವಾರ ಬೆಳಗ್ಗೆ ವಿಜಯನಗರ 2ನೇ ಹಂತದ ರಸ್ತೆ ಸಮೀಪ ಚೀಲದಲ್ಲಿ ತುಂಬಿಸಿ ತಂದು ಹಾಕಿದ್ದ ತಲೆಬುರುಡೆಗಳು ಪತ್ತೆಯಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಮಾಟ ಮಂತ್ರಕ್ಕಾಗಿ ತಲೆ ಬುರುಡೆಯನ್ನು ತಂದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಆದರೆ ತಲೆಬುರುಡೆಯನ್ನು ಯಾರು, ಎಲ್ಲಿಂದ ತಂದು ಇಲ್ಲಿ ಹಾಕಿದ್ದಾರೆ ಎಂಬಿತ್ಯಾದಿ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಾಗಿದೆ ಎಂದು ವರದಿ ವಿವರಿಸಿದೆ.

12 ತಲೆಬುರುಡೆಗಳ ಪೈಕಿ ಮಕ್ಕಳ ತಲೆಬುರುಡೆಯೂ ಪತ್ತೆಯಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಬೆಳಗ್ಗೆ ಪೌರ ಕಾರ್ಮಿಕರು ಕಸ ಎತ್ತಲು ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next